

ಮೇಷ:ಧಾರ್ವಿುಕ ಕಾರ್ಯಗಳಲ್ಲಿ ಒಲವು, ವಾದಕರು ಮತ್ತು ಗಾಯಕರಿಗೆ ಪ್ರಗತಿ, ಬಂಧು ಮಿತ್ರರ ಭೇಟಿ. ಶುಭಸಂಖ್ಯೆ 5
ವೃಷಭ: ಕುಟುಂಬದಲ್ಲಿ ಸಂತಸದಾಯಕ ಕ್ಷಣಗಳು, ಯಾರನ್ನೂ ಹೆಚ್ಚಾಗಿ ನಂಬಬೇಡಿ, ಅಶಾಂತಿ, ಶತ್ರು ಬಾಧೆ. ಶುಭಸಂಖ್ಯೆ 8
ಮಿಥುನ: ಉದ್ಯೋಗಸ್ಥ ಮಹಿಳಾ ವರ್ಗದವರಿಗೆ ಶುಭ, ಮಿತ್ರರಲ್ಲಿನ ಮನಸ್ತಾಪ ಅಂತ್ಯ, ವಿವಾಹ ಆಕಾಂಕ್ಷಿಗಳಿಗೆ ಶುಭ. ಶುಭಸಂಖ್ಯೆ 2
ಕಟಕ:ಚಾಲಕರಿಗೆ ಒತ್ತಡ, ಆಲಸ್ಯದಿಂದ ಅವಕಾಶ ವಂಚಿತ, ಮಕ್ಕಳ ವಿವಾಹದ ವಿಷಯದಲ್ಲಿ ಕಠಿಣ ನಿರ್ಧಾರ ತೆಗೆದು ಕೊಳ್ಳಿ. ಸಗಟು ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ 8
ಸಿಂಹ:ಲೇವಾದೇವಿ ಮಾಡುವವರಿಗೆ ಮೋಸ ಸಂಭವ, ಧರ್ಮ ಕಾರ್ಯದಲ್ಲಿ ಹಿಂಜರಿಕೆ ಬೇಡ, ಯಾತ್ರಾ ಸ್ಥಳಕ್ಕೆ ಭೇಟಿ. ಶುಭಸಂಖ್ಯೆ 3
ಕನ್ಯಾ:ಸರ್ಕಾರಿ ಕೆಲಸದ ಗುತ್ತಿಗೆದಾರರು ಎಚ್ಚರ, ವಿದ್ಯಾರ್ಥಿ ಗಳ ಅಭ್ಯಾಸದಲ್ಲಿ ಹಿನ್ನಡೆ, ಕೈ ಕಾಲು ಸೆಳೆತ ಇರುವವರು ಎಚ್ಚರ. ಆಹಾರ ಧಾನ್ಯ ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ 6
ತುಲಾ:ಹೊಸ ಅಂಗಡಿಯ ಆದಾಯದಲ್ಲಿ ಹೆಚ್ಚಳ, ಸ್ವಂತ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಕಾಣಲಿದ್ದೀರಿ, ಧನ ಸಂಪಾದನೆಗಾಗಿ ದುರ್ವರ್ಗ. ಶುಭಸಂಖ್ಯೆ 8
ವೃಶ್ಚಿಕ: ಶೀತಬಾಧೆಯಿಂದ ಎಚ್ಚರ, ರೇಷ್ಮೆ ವ್ಯಾಪಾರಸ್ಥರಿಗೆ ಆದಾಯ, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ಫಲ. ಹಿತ ಶತ್ರುಗಳಿಂದ ಪ್ರಗತಿಯಲ್ಲಿ ಅಡೆತಡೆ. ಶುಭಸಂಖ್ಯೆ 8
ಧನುಸ್ಸು: ಸಾರ್ವಜನಿಕ ಜೀವನದಲ್ಲಿ ಮಾತಿನಲ್ಲಿ ಎಚ್ಚರ, ಪಾರಂಪರಿಕ ಬೀಜೋತ್ಪಾದನೆ ಮಾಡುವ ನಿರ್ಧಾರ, ಮಕ್ಕಳ ಸಂತೋಷಕ್ಕಾಗಿ ಹಣವ್ಯಯ. ಶುಭಸಂಖ್ಯೆ 5
ಮಕರ: ಪೀಠೋಪಕರಣಗಳ ವ್ಯಾಪಾರಸ್ಥರಿಗೆ ಉತ್ತಮ ಲಾಭ, ಕಷ್ಟ ಕಾರ್ಪಣ್ಯಗಳಿಗೆ ಮಾರ್ಗದರ್ಶಕರಿಂದ ಸಹಾಯ, ಗೃಹ ನಿರ್ಮಾಣ ಕಾರ್ಯಗಳಲ್ಲಿ ಅಡೆತಡೆ. ಶುಭಸಂಖ್ಯೆ 1
ಕುಂಭ: ಚೋರ ಭಯ ಎಚ್ಚರದಿಂದಿರಿ, ಅಧಿಕ ಕೋಪ ಒಳ್ಳೆಯದಲ್ಲ, ವಿವಾಹ ಅಂತಿಮ ಹಂತಕ್ಕೆ ಬಂದು ವಿಫಲ. ಸ್ತ್ರೀಯರಿಂದ ಸಹಕಾರ. ಶುಭಸಂಖ್ಯೆ 6
ಮೀನ:ಹಿರಿಯರ ಮಾತಿಗೆ ಮನ್ನಣೆ, ಸಂಶೋಧಕರಿಗೆ ಅವಕಾಶಗಳು ಲಭ್ಯ, ಮನೆಯಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚಿಂತನೆ. ಶುಭಸಂಖ್ಯೆ 7