

ಮೇಷ: ಮನೋಬಲವನ್ನು ಕುಗ್ಗಿಸುವ ಘಟನೆ ನಡೆಯ ಬಹುದು. ಹೊಸ ಯೋಜನೆ ಕಾರ್ಯಗತವಾಗಲಿದೆ. ನೆಂಟರ ಆಗಮನ. ಶುಭಸಂಖ್ಯೆ: 8
ವೃಷಭ: ಉದ್ಯಮದ ಅಭಿವೃದ್ಧಿಗೆ ಎಲ್ಲಾ ಆಯಾಮಗಳಿಂದ ಚಿಂತಿಸಿ. ಕೃಷಿಕರಿಗೆ ವಿಶೇಷ ಸನ್ಮಾನ. ವಿದೇಶದಿಂದ ಪುತ್ರನ ಆಗಮನ. ಶುಭಸಂಖ್ಯೆ:1
ಮಿಥುನ: ಧರ್ಮಶಾಸ್ತ್ರಜ್ಞರ ಭೇಟಿ. ತೋಟಗಾರಿಕಾ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗಾವಣೆ. ನಂಬಿಗಸ್ತ ಕೆಲಸಗಾರರಿಂದ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 7
ಕಟಕ: ಕುಟುಂಬದ ಸದಸ್ಯರೊಂದಿಗೆ ಔತಣ ಕೂಟ. ಅಲಂಕಾರಿಕ ವಸ್ತು ಮಾರಾಟದ ಭರಾಟೆೆ. ಗಣ್ಯರ ಭೇಟಿಯಿಂದ ಕಾರ್ಯಸಿದ್ಧಿ. ಶುಭಸಂಖ್ಯೆ:5
ಸಿಂಹ: ಹೊಸ ವ್ಯವಹಾರದ ಸಮಗ್ರ ವಿಸ್ತರಣೆ. ಕೃಷಿ ಉದ್ಯಮಿಗಳಿಗೆ ಸಂತಸ. ಸಂಗಾತಿಯ ಸಲಹೆಯಿಂದ ಹೋಟಲ್ನಲ್ಲಿ ಲಾಭ. ಶುಭಸಂಖ್ಯೆ: 7
ಕನ್ಯಾ: ಪ್ರಭಾವಿಗಳ ಶಿಫಾರಸಿನಿಂದ ಉದ್ಯೋಗ ಪ್ರಾಪ್ತಿ. ದೀರ್ಘಕಾಲದ ಆಸ್ತಿ ವಿವಾದ ಇತ್ಯರ್ಥ. ಕಬ್ಬಿಣದ ವ್ಯಾಪಾರಿಗಳಿಗೆ ಭಾರಿಲಾಭ. ಶುಭಸಂಖ್ಯೆ: 6
ತುಲಾ: ಸಮಾಜ ಸೇವೆ ಮಾಡುವ ಭಾಗ್ಯ. ಕಲಾವಿದರಿಗೆ ಸದವಕಾಶ. ಸತ್ಸಂಗದಿಂದ ಮನಃಶಾಂತಿ. ಕಾಫಿ, ಅಡಕೆ ವ್ಯವಹಾರದಲ್ಲಿ ಲಾಭ.ಶುಭಸಂಖ್ಯೆ:9
ವೃಶ್ಚಿಕ: ಕೊಟ್ಟ ಕೆಲಸವನ್ನು ಸಾಹಸದಿಂದ ನಿರ್ವಹಿಸುವಿರಿ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಪ್ರಾಪ್ತಿ. ವೈದ್ಯರಿಗೆ ವರ್ಗಾವಣೆೆ. ಶುಭಸಂಖ್ಯೆ:4
ಧನಸ್ಸು: ಕೇಂದ್ರ ಸರ್ಕಾರಿ ನೌಕರಿಯಲ್ಲಿ ಬಡ್ತಿ. ರೋಗಿಗಳಿಗೆ ಹಣ್ಣು ವಿತರಿಸುವ ಸುಯೋಗ. ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:6
ಮಕರ: ಉದ್ಯೋಗ ಸ್ಥಾನದಲ್ಲಿ ಮಹಿಳೆಯರಿಗೆ ಹರ್ಷದ ವಾತಾವರಣ. ಕುಲದೇವರ ಸನ್ನಿಧಿಗೆ ಭೇಟಿ. ಜವಳಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:3
ಕುಂಭ: ಗಳಿಕೆಯ ಹೊಸ ಮಾರ್ಗದ ಹುಡುಕಾಟ. ಪಾಲುದಾರಿಕೆಯಲ್ಲಿ ಅಭಿವೃದ್ಧಿ. ಕಿರುಚಿತ್ರ ನಟರಿಗೆ ಅವಕಾಶಗಳ ಮಹಾಪೂರ. ಶುಭಸಂಖ್ಯೆ: 4
ಮೀನ: ಶಿಕ್ಷಣ ಸಂಸ್ಥೆಯ ಉದ್ಯೋಗಿಗಳಿಗೆ ವೇತನ ಪರಿಷ್ಕರಣೆ. ಮಗಳಿಗೆ ನಿರೀಕ್ಷಿತ ಕಾಲೇಜಿನಲ್ಲಿ ಪ್ರವೇಶ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:3