ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಶುಭಕಾರ್ಯ ಯತ್ನದಲ್ಲಿ ಯಶ

Nitya-Bhavisya-FILEminimizer
Published on

ಮೇಷ: ವಾಹನ ಖರೀದಿಗೆ ಅನುಕೂಲಕರ ದಿನ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಲಾಭ. ನ್ಯಾಯಾಲಯದ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ:1

ವೃಷಭ: ಪ್ರಯಾಣದಲ್ಲಿ ಅನುಕೂಲ ಮಾಡಿಕೊಡುವ ಘಟನೆ ನಡೆದೀತು. ಶತ್ರು ಉಪಟಳ. ಬಂಧುಗಳಿಂದ ಆರ್ಥಿಕ ಸಹಾಯ ಸಿಗಲಿದೆ. ಶುಭಸಂಖ್ಯೆ: 9

ಮಿಥುನ: ಮಹಿಳಾ ಉದ್ಯಮಿಗಳಿಗೆ ಪ್ರಗತಿ. ವಿದೇಶದಲ್ಲಿರುವ ಮಕ್ಕಳಿಂದ ಸಹಕಾರ. ಮಾತಿನಿಂದ ಸಮಸ್ಯೆ. ವಿದ್ಯಾಭ್ಯಾಸದಲ್ಲಿ ಅಡೆತಡೆ. ಶುಭಸಂಖ್ಯೆ:8

ಕಟಕ: ಭೂ ಸಂಬಂಧಿತ ವ್ಯವಹಾರದಲ್ಲಿ ಲಾಭ. ಸ್ಥಿರಾಸ್ತಿಯಿಂದ ಅನುಕೂಲವಾಗುವುದು. ಸಾಹಿತಿಗಳು ಮತ್ತು ಲೇಖಕರಿಗೆ ಯಶಸ್ಸು. ಶುಭಸಂಖ್ಯೆ:2

ಸಿಂಹ: ಅಧಿಕ ಖರ್ಚು. ಮೋಜು ಮಾಡುವತ್ತ ಒಲವು. ಕೆಲವರೊಂದಿಗೆ ಮನಸ್ತಾಪ. ಉದ್ಯೋಗ ಬದಲಾವಣೆಯಿಂದ ತೊಂದರೆ. ಶುಭಸಂಖ್ಯೆ:6

ಕನ್ಯಾ: ಸ್ನೇಹಿತರ ಸಹಕಾರ. ಪ್ರೀತಿ ಪ್ರೇಮದ ಕಡೆ ಒಲವು ಹರಿಸುವಿರಿ. ಆರ್ಥಿಕ ಸುಧಾರಣೆ. ಕೌಟುಂಬಿಕ ಸಹಕಾರ ಸಿಗಲಿದೆ. ಶುಭಸಂಖ್ಯೆ:5

ತುಲಾ: ಚಿನ್ನ ಬೆಳ್ಳಿ ವ್ಯವಹಾರದಲ್ಲಿ ಚೇತರಿಕೆ. ಕುಟುಂಬದಲ್ಲಿ ಉಲ್ಲಾಸಯುತ ವಾತಾವರಣ ಇರಲಿದೆ. ರೋಗಬಾಧೆಯಿಂದ ಮುಕ್ತಿ. ಶುಭಸಂಖ್ಯೆ:5

ವೃಶ್ಚಿಕ: ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ. ಆಲಸ್ಯದಿಂದಾಗಿ ಅವಕಾಶ ವಂಚಿತರಾಗುವಿರಿ. ಸಂತೋಷಕೂಟಕ್ಕಾಗಿ ಹಣ ನಷ್ಟ. ಶುಭಸಂಖ್ಯೆ:2

ಧನಸ್ಸು: ವ್ಯವಹಾರದಲ್ಲಿ ಉತ್ತಮ ಅವಕಾಶ. ಪಿತ್ರಾರ್ಜಿತ ಆಸ್ತಿಲಾಭ. ರೋಗಬಾಧೆಯಿಂದ ಮುಕ್ತಿ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ:2

ಮಕರ: ಶುಭಕಾರ್ಯ ಯತ್ನದಲ್ಲಿ ಯಶ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಸಂಗಾತಿ,ಮಕ್ಕಳ ಸಹಾಯದಿಂದ ಕಾರ್ಯಸಾಧನೆ. ಶುಭಸಂಖ್ಯೆ:3

ಕುಂಭ: ವೃತ್ತಿಯಲ್ಲಿ ಶತ್ರು ಉಪಟಳ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಮಾನಸಿಕ ಚಾಂಚಲ್ಯ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ:7

ಮೀನ: ಕೃಷಿಕರಿಗೆ ಹಿತಶತ್ರುಗಳ ಕಾಟ. ಕೋರ್ಟ್ ಕೇಸುಗಳಲ್ಲಿ ಯಶಸ್ಸು. ರೋಗಬಾಧೆೆಯಿಂದ ಮುಕ್ತಿ. ಆರ್ಥಿಕ ಪ್ರಗತಿ ಕಾಣಲಿದ್ದೀರಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net