

ಮೇಷ: ಆಸ್ತಿ ವಿಭಾಗದಲ್ಲಿ ಸಹೋದರರಿಂದ ವಿರೋಧ ಬಂದೀತು. ಮಗಳ ವಿವಾಹಕ್ಕೆ ಸಿದ್ಧತೆ. ವಿದೇಶ ಪ್ರಯಾಣಕ್ಕೆ ವೀಸಾ ರದ್ದಾಗಲಿದೆ. ಶುಭಸಂಖ್ಯೆ:5
ವೃಷಭ: ವಸ್ತ್ರಾಭರಣ ಖರೀದಿಯಲ್ಲಿ ದುಂದುವೆಚ್ಚ ಬೇಡ. ಹಣ್ಣು ಮತ್ತು ತರಕಾರಿ ವ್ಯಾಪಾರದಲ್ಲಿ ನಷ್ಟ. ಪಾಲುದಾರಿಕೆಯಲ್ಲಿ ಗೊಂದಲ.ಶುಭಸಂಖ್ಯೆ:3
ಮಿಥುನ: ಪತ್ನಿಯ ಅರೋಗ್ಯ ಸಮಸ್ಯೆ ಬಿಗಡಾಯಿಸಲಿದೆ. ಪತ್ರಿಕೆ, ಸುದ್ದಿವಾಹಿನಿ ಕೆಲಸಗಾರರಿಗೆ ವರ್ಗಾವಣೆಯಾಗುವ ಸಾಧ್ಯತೆ. ಶುಭಸಂಖ್ಯೆ:7
ಕಟಕ: ಧಾರ್ವಿುಕ ಕ್ಷೇತ್ರದವರಿಗೆ ಅಧಿಕಾರ ಕೈ ತಪ್ಪಲಿದೆ. ವ್ಯಾಪಾರದ ಕಾರಣಕ್ಕೆ ವಿದೇಶ ಪ್ರವಾಸ. ಕಚೇರಿಯಲ್ಲಿ ಹಿತಶತ್ರುಗಳ ಕಾಟ. ಶುಭಸಂಖ್ಯೆ: 2
ಸಿಂಹ: ಆಯುರ್ವೆದ ಔಷಧಿ ವ್ಯಾಪಾರಿಗಳಿಗೆ ಲಾಭ. ಅಲಂಕಾರಿಕ ವಸ್ತ್ರಗಳ ಖರೀದಿಯಲ್ಲಿ ನಷ್ಟ. ಕೃಷಿ ಭೂಮಿ ಖರೀದಿಯಲ್ಲಿ ಸಮಸ್ಯೆಯಾಗುವುದು.ಶುಭಸಂಖ್ಯೆ:7
ಕನ್ಯಾ: ತಾಯಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ತಾಂತ್ರಿಕ ಪರಿಣಿತರಿಗೆ ಬೇಡಿಕೆ. ಶುಭಸಂಖ್ಯೆ:4
ತುಲಾ: ಪಾಲುದಾರರೊಂದಿಗೆ ಮನಸ್ತಾಪ. ಕುಟುಂಬದೊಂದಿಗೆ ವಿಹಾರ. ಗೃಹ ನಿರ್ವಣಕ್ಕೆ ಚಾಲನೆ. ಅಪರಿಚಿತರಿಂದ ಮೋಸ. ಶುಭಸಂಖ್ಯೆ:1
ವೃಶ್ಚಿಕ: ಆಹಾರ ವ್ಯತ್ಯಾಸ, ಅನಾರೋಗ್ಯ. ಕೇಂದ್ರ ಸರ್ಕಾರಿ ಅಧಿಕಾರಿಗಳಿಗೆ ವಿದೇಶ ಪ್ರಯಾಣ. ಕಟ್ಟಡಸಾಮಗ್ರಿ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:2
ಧನುಸ್ಸು: ಆಧ್ಯಾತ್ಮಿಕತೆಯಿಂದ ಮಾನಸಿಕ ನೆಮ್ಮದಿ ಪಡೆಯುವಿರಿ. ಔಷಧ ವ್ಯಾಪಾರದಲ್ಲಿ ಲಾಭ. ಆರಕ್ಷಕ ಸಿಬ್ಬಂದಿಗೆ ವರ್ಗಾವಣೆ ಸಾಧ್ಯತೆ.ಶುಭಸಂಖ್ಯೆ: 1
ಮಕರ: ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಖಾಸಗಿ ಕ್ಷೇತ್ರದ ನೌಕರರಿಗೆ ವೇತನ ಪರಿಷ್ಕರಣೆ ಆಗಲಿದೆ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:7
ಕುಂಭ: ಅವಿವಾಹಿತರಿಗೆ ವಿವಾಹ ಸಿದ್ಧಿಯಾಗಲಿದೆ. ನ್ಯಾಯಾಲಯದಲ್ಲಿರುವ ಆಸ್ತಿ ಕೇಸ್ ಇತ್ಯರ್ಥವಾಗಲಿದೆ. ಕ್ರೀಡಾಪಟುಗಳಿಗೆ ಗೌರವ. ಶುಭಸಂಖ್ಯೆ:6
ಮೀನ: ಜೇನು ಕೃಷಿಯಲ್ಲಿ ಉತ್ತಮ ಲಾಭ. ಸಮುದ್ರ ಉತ್ಪನ್ನ ಮಾರಾಟಗಾರರಿಗೆ ಲಾಭ. ಯಕ್ಷಗಾನ, ನಾಟಕ ಕಲಾವಿದರಿಗೆ ಸನ್ಮಾನ. ಶುಭಸಂಖ್ಯೆ:4