ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಮಾನಸಿಕ ನೆಮ್ಮದಿ

astrology
Published on

ಮೇಷ: ಕುಟುಂಬಸ್ಥರೊಂದಿಗೆ ಉತ್ತಮ ಬಾಂಧವ್ಯ. ಆರ್ಥಿಕವಾಗಿ ಚೇತರಿಕೆ. ತಾಯಿಯಿಂದ ಸಹಕಾರ. ಸಂಬಂಧಿಕರೊಂದಿಗೆ ಎಚ್ಚರ.ಶುಭಸಂಖ್ಯೆ: 9

ವೃಷಭ: ವ್ಯಾಪಾರದಲ್ಲಿ ಸವಾಲು ಎದುರಾಗಬಹುದು. ಬಂಧುಗಳಿಂದ ಸಹಾಯದ ನಿರೀಕ್ಷೆ. ಮಾನಸಿಕ ಗೊಂದಲಗಳು ಕಾಡಬಹುದು.ಶುಭಸಂಖ್ಯೆ: 8

ಮಿಥುನ: ಆರ್ಥಿಕ ಪ್ರಗತಿ. ಧಾರ್ವಿುಕ ಕಾರ್ಯಗಳಿಗೆ ಖರ್ಚು. ದುಶ್ಚಟದಿಂದ ಹೊರಬರುವಿರಿ. ಮಕ್ಕಳೊಂದಿಗೆ ತೀರ್ಥಯಾತ್ರೆ ಯೋಚನೆ.ಶುಭಸಂಖ್ಯೆ:2

ಕಟಕ: ವ್ಯವಹಾರದಲ್ಲಿ ಲಾಭ. ವಸ್ತ್ರಾಭರಣ ಖರೀದಿಗೆ ಮನಸ್ಸು ಮಾಡುವಿರಿ. ಸ್ಥಾನ ಪಲ್ಲಟವಾಗುವ ಸಾಧ್ಯತೆ. ಕುಲದೇವರನ್ನು ಭಜಿಸಿ. ಶುಭಸಂಖ್ಯೆ:4

ಸಿಂಹ: ಮಕ್ಕಳಿಂದ ಹೆಚ್ಚಿನ ಖರ್ಚು. ಉದ್ಯೋಗದಲ್ಲಿ ಸಣ್ಣ ವಿಘ್ನಗಳು ಎದುರಾಗಬಹುದು. ವಿದ್ಯಾಭ್ಯಾಸದಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ:9

ಕನ್ಯಾ: ಪ್ರಯಾಣದಿಂದ ಅನುಕೂಲ ಮತ್ತು ಲಾಭ ಆಗಬಹುದು. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಲಿದೆ. ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:3

ತುಲಾ: ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ. ಪ್ರಯಾಣದಲ್ಲಿ ನಿರಾಸೆ ಎದುರಾದೀತು. ಮಾನಸಿಕ ನೆಮ್ಮದಿ. ಶುಭ ಕಾರ್ಯಕ್ಕೆ ತಯಾರಿ.ಶುಭಸಂಖ್ಯೆ:3

ವೃಶ್ಚಿಕ: ವೈವಾಹಿಕ ಜೀವನದ ಬಗ್ಗೆ ಸ್ವಲ್ಪ ಮಟ್ಟಿನ ಚಿಂತೆ ಪರಿಹಾರ. ಒಪ್ಪಂದದ ವ್ಯವಹಾರಗಳಲ್ಲಿ ಲಾಭ. ಸಂಗಾತಿಯಿಂದ ಅನುಕೂಲ. ಶುಭಸಂಖ್ಯೆ: 2

ಧನುಸ್ಸು: ಸಾಲಬಾಧೆ , ಶತ್ರುಕಾಟದಿಂದ ತೊಂದರೆ ನಿವಾರಣೆ. ವಾಹನ ಸೌಖ್ಯ. ಆಕಸ್ಮಿಕ ಧನಲಾಭ, ಭೂಮಿಯಿಂದ ಲಾಭ ಸಿಗಲಿದೆ. ಶುಭಸಂಖ್ಯೆ:5

ಮಕರ: ಕಲಾಕ್ಷೇತ್ರದವರಿಗೆ ಯಶಸ್ಸು. ಉದ್ಯೋಗದ ಚಿಂತೆ. ಸೂಕ್ತ ಪರಿಹಾರ, ಮನೆಯಲ್ಲಿ ಶಾಂತಿ. ಪೊಲೀಸರೊಂದಿಗೆ ವಾದ -ವಿವಾದ. ಶುಭಸಂಖ್ಯೆ:3

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಗ. ಸ್ವಯಂ ಉದ್ಯೋಗಸ್ಥರಿಗೆ ಶುಭ ಶುಭಸಂಖ್ಯೆ:.9

ಮೀನ: ಅಲಂಕಾರಿಕ ಆಲೋಚನೆ. ಅಧಿಕಾರಿ ವರ್ಗದವರಿಂದ ಸಮಸ್ಯೆ ಬಂದೀತು. ಉದ್ಯೋಗದ ಹುಡುಕಾಟದಲ್ಲಿ ನಿರಕ್ಷಿತರಾಗಿರುವಿರಿ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net