

ಮೇಷ: ಶತ್ರುಗಳ ವಿರುದ್ಧ ಎಚ್ಚರ ವಹಿಸಿ. ಹಿರಿಯರಿಂದ ಉಡುಗೊರೆಗಳು ಲಭ್ಯ. ಅತಿಯಾದ ಮಾತಿನಿಂದ ತೊಂದರೆಯಾಗಬಹುದು. ಶುಭಸಂಖ್ಯೆ:5
ವೃಷಭ: ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆ. ಅವಶ್ಯಕತೆಗಿಂತ ಹೆಚ್ಚು ಮಾತನಾಡಬೇಡಿ. ಆರ್ಥಿಕ ಸಹಾಯ ನಿಮಿತ್ತ ಪ್ರಯಾಣ. ಶುಭಸಂಖ್ಯೆ:3
ಮಿಥುನ: ಸಂಗಾತಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು. ಔತಣಕೂಟಕ್ಕೆ ಅಧಿಕ ಖರ್ಚು. ಸಂಗಾತಿಯ ವರ್ತನೆಯಿಂದ ಅನುಮಾನ. ಶುಭಸಂಖ್ಯೆ: 9
ಕಟಕ: ಮಾನಸಿಕ ಅಸ್ವಸ್ಥತೆ ಕಾಡಬಹುದು. ವಾಹನ ಚಲಾವಣೆಯಲ್ಲಿ ಎಚ್ಚರವಿರಲಿ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬಂದೀತು. ಶುಭಸಂಖ್ಯೆ:4
ಸಿಂಹ: ಕುಟುಂಬದಲ್ಲಿ ಆಸ್ತಿಕಲಹ ವಿಪರೀತಕ್ಕೆ ಹೋದೀತು. ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಬಂಧು ಮಿತ್ರರಲ್ಲಿ ಸ್ನೇಹವೃದ್ಧಿ. ಶುಭಸಂಖ್ಯೆ: 8
ಕನ್ಯಾ: ಸುಖ-ಸಂತಸದ ವಾತಾವರಣ. ಕುಟುಂಬ ಸಮೇತ ವಿಹಾರಕ್ಕೆ ತೆರಳುವಿರಿ. ಆತ್ಮೀಯ ಸ್ನೇಹಿತನ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:2
ತುಲಾ:ಅವಿವಾಹಿತರಿಗೆ ವಿವಾಹ ಯೋಗ. ಕಚೇರಿ ಕೆಲಸಕ್ಕೆ ಅಧಿಕ ತಿರುಗಾಟ. ರಾಜಕೀಯ ರಂಗದವರಿಗೆ ಸ್ಥಾನ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ:2
ವೃಶ್ಚಿಕ: ನಂಬಿದ ಜನರಿಂದ ಮೋಸವಾದೀತು. ಮಿತ್ರರಲ್ಲಿ ಅನವಶ್ಯಕ ದ್ವೇಷ ಸಾಧಿಸಬೇಡಿ. ಸಾಲ ಮರುಪಾವತಿಗೆ ಹಣದ ತೊಂದರೆ. ಶುಭಸಂಖ್ಯೆ:6
ಧನುಸ್ಸು: ಯತ್ನ ಕಾರ್ಯಗಳಲ್ಲಿ ಜಯ. ಆಯುರ್ವೆದ ಔಷಧಿ ಮಳಿಗೆ ಮಾಲೀಕರಿಗೆ ಲಾಭ. ಕ್ರೀಡಾಪಟುಗಳಿಗೆ ವಿಶೇಷ ಗೌರವ ಸಿಗಲಿದೆ. ಶುಭಸಂಖ್ಯೆ: 2
ಮಕರ:ಬ್ಯಾಂಕ್ ವ್ಯವಹಾರ ಸುಗಮವಾಗಲಿದೆ. ತೀರ್ಥಕ್ಷೇತ್ರ ದರ್ಶನ ಮಾಡುವಿರಿ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಶುಭಸಂಖ್ಯೆ:3
ಕುಂಭ: ಪರರಿಗೆ ಸಹಾಯ ಮಾಡುವ ಅವಕಾಶ ಸಿಗಲಿದೆ, ಭಯ ಭೀತಿ ನಿವಾರಣೆಯಾಗುವುದು. ಆಸ್ತಿ ವಿವಾದ ಕೋರ್ಟ್ ಮೆಟ್ಟಲೆರಲಿದೆ. ಶುಭಸಂಖ್ಯೆ:6
ಮೀನ: ಗೃಹ ನಿರ್ಮಾಣ ಕೆಲಸ ಕಾರ್ಯಗಳಲ್ಲಿ ತೊಂದರೆ. ಮಕ್ಕಳೊಂದಿಗೆ ಮನಸ್ತಾಪ. ವ್ಯರ್ಥ ಧನಹಾನಿ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ:1