ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಬೀಗರಿಂದ ಧನಾಗಮನ

Nitya Bhavisya Vijayavani
Published on

ಮೇಷ: ವ್ಯಾಪಾರದಲ್ಲಿ ಕೆಲಸಗಾರರ ಅಭಾವ. ಬೀಗರಿಂದ ಧನಾಗಮನ. ವಾಹನದಿಂದ ಲಾಭ. ಸಮಾರಂಭದಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 5

ವೃಷಭ: ಶೈಕ್ಷಣಿಕ ಕ್ಷೇತ್ರದ ಉದ್ಯೋಗದಲ್ಲಿ ನಷ್ಟ. ನ್ಯಾಯಾಲಯದಲ್ಲಿ ಜಯ ನಿಮ್ಮ ಕಡೆಗಿದೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9

ಮಿಥುನ: ಉದರ ಸಂಬಂಧಿ ವ್ಯಾಧಿ ಉಲ್ಬಣ. ಬರವಣಿಗೆಯಲ್ಲಿ ಎಚ್ಚರ. ಸ್ವಯಂಕೃತ ಅಪರಾಧದಿಂದ ಬಂಧುಗಳಲ್ಲಿ ಅವಮಾನವಾದೀತು. ಶುಭಸಂಖ್ಯೆ: 7

ಕಟಕ:ವಾಹನದಿಂದ ಅಪಾಯ. ನಿಮ್ಮ ನಿರ್ಧಾರಗಳಿಂದ ಕುಟುಂಬಕ್ಕೆ ಕಷ್ಟ. ಆರೋಗ್ಯದ ಬಗ್ಗೆ ಎಚ್ಚರ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ:3

ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು. ಮನೋಭಿಲಾಷೆಗಳು ಈಡೇರುವವು. ಮಕ್ಕಳ ವರ್ತನೆ, ಚಲನವಲನದ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 2

ಕನ್ಯಾ: ಸ್ನೇಹಿತರಿಂದ ನಷ್ಟವಾಗುವುದು. ಅಮೂಲ್ಯ ವಸ್ತು ಕಳ್ಳತನವಾಗುವ ಸಾಧ್ಯತೆಯಿದೆ. ಉಲ್ಲಾಸಭರಿತ ಪ್ರವಾಸ ಒದಗಿ ಬರಲಿದೆ. ಶುಭಸಂಖ್ಯೆ: 4

ತುಲಾ: ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಎಚ್ಚರವಿರಲಿ. ಮಕ್ಕಳಿಂದ ದುಃಖ. ವೀಸಾ ಸಮಸ್ಯೆ ತಲೆದೋರಲಿದೆ. ಕೃಷಿಕರಿಗೆ ವಿಶೇಷ ಸನ್ಮಾನ ಶುಭಸಂಖ್ಯೆ: 1

ವೃಶ್ಚಿಕ: ಆಸ್ತಿ ವಿಷಯದಲ್ಲಿ ಮೋಸವಾಗಬಹುದು. ರಹಸ್ಯಗಳು ಬಯಲಾಗುವ ಸಾಧ್ಯತೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಶುಭಸಂಖ್ಯೆ: 8

ಧನುಸ್ಸು: ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿಯಾಗುವುದು. ಆಕಸ್ಮಿಕ ಅಧಿಕಾರ ಪ್ರಾಪ್ತಿ. ಶುಭಸಂಖ್ಯೆ: 2

ಮಕರ: ಪಾಲುದಾರಿಕೆಯಿಂದ ಕೂಡಿಟ್ಟ ಹಣ ಕಳೆದುಕೊಳ್ಳುವಿರಿ. ಅನಾರೋಗ್ಯದಿಂದ ನಿದ್ರಾಭಂಗ. ಯಂತ್ರೋಪಕರಣಗಳಿಂದ ಲಾಭ. ಶುಭಸಂಖ್ಯೆ: 6

ಕುಂಭ: ಆಸ್ತಿಯ ಮೇಲೆ ಸಾಲ ಮಾಡುವ ಸಾಧ್ಯತೆಯಿದೆ. ಕಾರ್ವಿುಕರ ಕೊರತೆ ಬಗೆಹರಿಯುವುದು. ಬಾಡಿಗೆದಾರರ ಸಮಸ್ಯೆ ಕಾಡುವುದು. ಶುಭಸಂಖ್ಯೆ: 8

ಮೀನ: ಮನೋಲ್ಲಾಸಕ್ಕಾಗಿ ಸಂಗಾತಿಯೊಂದಿಗೆ ಪ್ರವಾಸ. ಉದ್ಯೋಗದಲ್ಲಿ ನಿರಾಸಕ್ತಿಯಿಂದ ತೊಂದರೆ. ಮಾಟ ಮಂತ್ರದ ಬಗ್ಗೆ ಭಯ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net