ಆತ್ಮಹತ್ಯೆ ಮಾಡಿಕೊಂಡ ದಾದರ್ ಸಂಸದ ಮೋಹನ್ ದೇಲ್ಕರ್

mohan delkar
mohan delkar
Published on

ಮುಂಬೈ: ಕೇಂದ್ರಾಡಳಿತ ಪ್ರದೇಶವಾದ ದಾದರ್ ಮತ್ತು ನಗರ ಹವೇಲಿ ಸಂಸದ ಮೋಹನ್ ದೇಲ್ಕರ್ (58) ಅವರ ಮೃತದೇಹ ಮುಂಬೈನ ಮರಿನ್ ಡ್ರೈವ್​ ಹೋಟೆಲ್ ಒಂದರ ಕೋಣೆಯಲ್ಲಿ ಇಂದು ಪತ್ತೆಯಾಗಿದೆ.

ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳದಲ್ಲಿ ಡೆತ್​ನೋಟ್ ಪತ್ತೆಯಾಗಿದೆ ಎಂದು ಮಾಧ್ಯಮಗಳ ವರದಿ ತಿಳಿಸಿವೆ. ಅಲ್ಲದೇ ಅವರ ಸಾವಿನ ಸುತ್ತಮುತ್ತ ಅನುಮಾನಗಳೂ ಮೂಡಿವೆ.

ದಾದರ್ ನಗರ ಹವೇಲಿಯಿಂದ ಏಳು ಬಾರಿ ಸಂಸದರಾಗಿದ್ದದ ಮೋಹನ್ ಮೊದಲು ಕಾಂಗ್ರೆಸ್​ನಲ್ಲಿದ್ದರು. 2019 ರಲ್ಲಿ ಕಾಂಗ್ರೆಸ್ ತೊರೆದು ಜೆಡಿಯು ಬೆಂಬಲದಿಂದ ಪಕ್ಷೇತರರಾಗಿ ಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net