

ಎಚ್.ಡಿ.ಕೋಟೆ: ಜನತಾದಳ (ಜಾತ್ಯತೀತ) ಪಕ್ಷದ 2024-26 ರ ಸಾಂಸ್ಥಿಕ ಚುನಾವಣೆಗಳ ಜಿಲ್ಲಾ ಚುನಾವಣಾಧಿಕಾರಿಯನ್ನಾಗಿ ವಕೀಲ ಡಿ.ಆರ್.ಮಹೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಚುನಾವಣಾ ಅಧಿಕಾರಿ ಕೆ.ಎ.ತಿಪ್ಪೇಸ್ವಾಮಿ ಅವರು ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಗಳನ್ನು ಪಕ್ಷದ ಸಂವಿಧಾನ ಮತ್ತು ನಿಯಮಗಳನ್ವಯ ನಿಗದಿಪಡಿಸಿದ ಸಮಯದೊಳಗೆ ನಿಷ್ಪಕ್ಷಪಾತದಿಂದ ನಡೆಸುವಂತೆ ಸೂಚಿಸಲಾಗಿದೆ.