ಸತ್ತವರ ಸಂಖ್ಯೆ ಮೂರಕ್ಕೆ ಏರಿಕೆ

Published on

ಅರಕಲಗೂಡು: ತಾಲೂಕಿನ ಕೊಣನೂರಿನಲ್ಲಿ ನಡೆದ ಸಿಲಿಂಡರ್ ಸೊಓಂೀಟ ದುರಂತದಲ್ಲಿ ಬದುಕುಳಿದಿದ್ದ ಗಾಯಾಳು ಮೀನಾಕ್ಷಿ (51) ಗುರುವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಕೊಣನೂರಿನಲ್ಲಿ ಕಳೆದ ಭಾನುವಾರ ಮೃತ ಕರಿಯಮ್ಮ ಅವರ ತಿಥಿ ಕಾರ್ಯಕ್ಕಾಗಿ ಅಡುಗೆ ಮಾಡುತ್ತಿದ್ದಾಗ ಗ್ಯಾಸ್ ಸೋರಿಕೆಯಾಗಿ ಸೋಸೆಯರಾದ ಮಂಗಳಮ್ಮ, ರಾಧಮ್ಮ, ಮೀನಾಕ್ಷಿ ಗಾಯಗೊಂಡಿದ್ದರು. ಮೂವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳಾ (53) ಅವರು ಮಂಗಳವಾರ ಹಾಗೂ ರಾಧಮ್ಮ (73) ಬುಧವಾರ ಮೃತಪಟ್ಟಿದ್ದರು. ಮೀನಾಕ್ಷಿ (51) ಗುರುವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿಸಿ ಭೇಟಿ: ಕೊಣನೂರಿಗೆ ಗುರುವಾರ ಜಿಲ್ಲಾಕಾರಿ ಸಿ.ಸತ್ಯಬಾಮಾ ಭೇಟಿ ನೀಡಿ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಮುಖ್ಯಮಂತ್ರಿ ಪರಿಹಾರ ನಿಯಿಂದ ಸಹಾಯ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಮೃತ ಮಂಗಳಾ ಅವರ ಪುತ್ರ ಚಿರಂತ್ ಬಿಎಸ್ಸಿ ಪದವಿ ಮುಗಿಸಿದ್ದು ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವುದಾಗಿ ತಿಳಿಸಿದರು.

ತಹಸೀಲ್ದಾರ್ ಸೌಮ್ಯಾ, ಗ್ರೇಡ್-2 ತಹಸೀಲ್ದಾರ್ ಸಿ.ಸ್ವಾಮಿ, ಉಪ ತಹಸೀಲ್ದಾರ್ ಕುಮಾರ್, ರಾಜಸ್ವ ನಿರೀಕ್ಷಕ ಬಲರಾಮ್, ಎಸ್‌ಐ ಗಿರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net