'ಮುರಾಸು' ಚಂಡಮಾರುತದ ಅಬ್ಬರ: ಆಂಧ್ರಪ್ರದೇಶಕ್ಕೆ ಕರ್ನಾಟಕದ ಅಭಯ | Cyclone Murasu

Andhra Pradesh Cyclone
'ಮುರಾಸು' ಚಂಡಮಾರುತದ ಆರ್ಭಟ
Published on: 
Summary

ಮುರಾಸು ಚಂಡಮಾರುತದ ಪರಿಣಾಮ ಚೆನ್ನೈನ ಉತ್ತರ ಭಾಗದಲ್ಲಿ ಭಾರೀ ಮಳೆ

ಪ್ಯಾರಿಸ್, ಮನಾಲಿ, ಮಧವರಂ ಸೇರಿದಂತೆ ಹಲವೆಡೆ ರಸ್ತೆಗಳು ಜಲಾವೃತ

ನೆಲ್ಲೂರು ಮತ್ತು ನರ್ಸಾಪುರ ನಡುವೆ ಕರಾವಳಿ ದಾಟಲಿರುವ ಚಂಡಮಾರುತ

Andhra Pradesh Cyclone: ಬಂಗಾಳಕೊಲ್ಲಿಯಲ್ಲಿ 'ಮುರಾಸು' ಚಂಡಮಾರುತ ತೀವ್ರಗೊಂಡ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಸೋಮವಾರ ಮುಂಜಾನೆಯಿಂದಲೇ ಜೋರು ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಜನಜೀವನ ತೊಂದರೆಗೊಳಗಾಗಿದೆ.

ನಗರದ ಉತ್ತರ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಪ್ಯಾರಿಸ್‌ನಲ್ಲಿ 149.2 ಮಿ.ಮೀ, ಹೊಸ ಮನಾಲಿ ಟೌನ್‌ನಲ್ಲಿ 141.6 ಮಿ.ಮೀ ಮತ್ತು ಮನಾಲಿಯಲ್ಲಿ 136.2 ಮಿ.ಮೀ ಮಳೆ ದಾಖಲಾಗಿದೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಆಯುಕ್ತ ಜಿ.ಎಸ್. ಸಮೀರನ್ ಅವರು ಜಲಾವೃತಗೊಂಡ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ.

ಆಂಧ್ರಕ್ಕೆ ಬೆಂಬಲಕ್ಕೆ ನಿಂತ ನೆರೆ ರಾಜ್ಯಗಳು

ಚಂಡಮಾರುತದ ಅಬ್ಬರದಿಂದ ವಿದ್ಯುತ್ ಸರಬರಾಜು ಹಾಗೂ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗುವ ಸಾಧ್ಯತೆ ಇರುವುದರಿಂದ, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತಮಿಳುನಾಡು ಸಿಎಂ ವಿಜಯ್ ಮತ್ತು ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ರಂಗಸ್ಥಳಂ ನಂತ್ರ ರಾಮ್ ಚರಣ್-ಸುಕುಮಾರ್ ಕಾಂಬಿನೇಷನ್​ನ ಹೊಸ ಸಿನಿಮಾ ಅನೌನ್ಸ್; ಹೆಸರಿಡದ RC17 ಚಿತ್ರಕ್ಕೆ ಚಿರಂಜೀವಿ ಬೆಂಬಲ

ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಅಗತ್ಯ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ನೀಡುವಂತೆ ಕೋರಿದ್ದು, ನೆರೆ ರಾಜ್ಯಗಳ ಮುಖ್ಯಮಂತ್ರಿಗಳು ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ. ಈಗಾಗಲೇ ತೆಲಂಗಾಣ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಆಂಧ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಚುರುಕುಗೊಳಿಸಿದೆ.