

ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ 'ಮೊಂಥಾ' ಭೀಕರ ಚಂಡಮಾರುತದಿಂದಾಗಿ 87,000 ಹೆಕ್ಟೇರ್ ಬೆಳೆಗಳು, 380 ಕಿ.ಮೀ ರಸ್ತೆಗಳು ಮತ್ತು 14 ಸೇತುವೆಗಳನ್ನು ಹಾನಿಗೊಳಿಸಿದೆ ಎಂದು ಬುಧವಾರ ವರದಿಯಾಗಿದೆ.
ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿಗೆ ಸಲ್ಲಿಸಿದ ಪ್ರಾಥಮಿಕ ಅಂದಾಜಿನ ಪ್ರಕಾರ "304 ಮಂಡಲಗಳಲ್ಲಿ 87,000 ಹೆಕ್ಟೇರ್‌ಗಳಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ಭತ್ತ, ಹತ್ತಿ, ಮೆಕ್ಕೆಜೋಳ ಮತ್ತು ಉದ್ದು ಜತೆಗೆ, 59,000 ಹೆಕ್ಟೇರ್‌ಗಳಲ್ಲಿ ಬೆಳೆಗಳು ನೀರಿನಿಂದ ಆವೃತವಾಗಿದ್ದು, 78,796 ರೈತರ ಮೇಲೆ ಪರಿಣಾಮ ಬೀರಿದೆ" ಎಂದು ವರದಿ ಉಲ್ಲೇಖಿಸಿದೆ.
ರಸ್ತೆಗಳು ಮತ್ತು ಸೇತುವೆಗಳಿಗೆ 1,424 ಕೋಟಿ ರೂ. ಹಾನಿಯಾಗಿದ್ದು, ಗ್ರಾಮೀಣ ನೀರು ಸರಬರಾಜು ಮೂಲಸೌಕರ್ಯಕ್ಕೆ 36 ಕೋಟಿ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ವ್ಯವಸ್ಥೆಯು ದುರ್ಬಲಗೊಂಡಿದ್ದರಿಂದ ಅನೇಕ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ.
ವರದಿಯ ಪ್ರಕಾರ, ಚಂಡಮಾರುತವು 1,434 ಹಳ್ಳಿಗಳು ಮತ್ತು 48 ಪುರಸಭೆಗಳಲ್ಲಿ 18 ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ. 1,209 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 1.6 ಲಕ್ಷ ಸ್ಥಳಾಂತರಿಸಲ್ಪಟ್ಟವರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.(ಏಜೆನ್ಸೀಸ್ )