ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೈಕಲ್ ಜಾಥಾ

fit for india cylcing
ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸೈಕಲ್ ಜಾಥಾಕ್ಕೆ ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ ಚಾಲನೆ ನೀಡಿದರು. ಸಂಜೀವ್‌ಕುಮಾರ್, ಕೃಷ್ಣಮೂರ್ತಿ, ದಿಲೀಪ್ ಇತರರಿದ್ದರು.
Published on

ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿಶ್ವ ಸೈಕಲ್ ದಿನದ ಅಂಗವಾಗಿ ಫಿಟ್ ಇಂಡಿಯಾ ಕಾರ್ಯಕ್ರಮದಡಿ ಭಾನುವಾರ ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸೈಕಲ್ ಜಾಥಾ ನಡೆಯಿತು.

ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸೈಕಲ್ ಜಾಥಾಕ್ಕೆ ಎಎಸ್ಪಿ ಅನಿಲ್ಕುಮಾರ್ ಭೂಮರಡ್ಡಿ ಚಾಲನೆ ನೀಡಿದರು. ಎಸ್ಪಿ ಕಚೇರಿಯಿಂದ ಜಾಥಾ ಆರಂಭವಾಗಿ ಬಿ.ಎಚ್.ರಸ್ತೆಯ ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪನಾಯಕ ವೃತ್ತ, ವಿಶ್ವೇಶ್ವರಯ್ಯ ವೃತ್ತ, ಶಂಕರಮಠ ವೃತ್ತ, ಸರ್ವಜ್ಞ ವೃತ್ತ, ಉಷಾ ನರ್ಸಿಂಗ್ ಹೋಂ ಅಕ್ಕಮಹಾದೇವಿ ವೃತ್ತ, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ತರಕಾರಿ ಮಾರ್ಕೆಟ್, ಎಪಿಎಂಸಿ, ಆಲ್ಕೊಳ ವೃತ್ತ, ಐಬಿ ವೃತ್ತದ ಮೂಲಕ ಸಾಗಿತು.

ಪೊಲೀಸ್ ಇಲಾಖೆ, ಗೃಹರಕ್ಷಕ ದಳದ ಸಿಬ್ಬಂದಿ, ಶಿವಮೊಗ್ಗ ಸೈಕಲ್ ಕ್ಲಬ್ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಡಿವೈಎಸ್ಪಿಗಳಾದ ಸಂಜೀವ್‌ಕುಮಾರ್, ಕೃಷ್ಣಮೂರ್ತಿ, ದಿಲೀಪ್, ಇನ್ಸ್‌ಪೆಕ್ಟರ್ ಸಿದ್ದೇಗೌಡ, ಪಿಎಸ್‌ಐಗಳಾದ ತಿರುಮಲೇಶ್, ನವೀನ್ ಹಾಗೂ ಜಿಲ್ಲಾ ಗೃಹರಕ್ಷಕ ದಳದ ತರಬೇತಿ ಅಧಿಕಾರಿ ಹರೀಶ್ ಎಸ್. ಪಾಟೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net