ಪದವಿ ಕಾಲೇಜುಗಳಲ್ಲಿ ಸೈಬರ್ ಸುರಕ್ಷತೆ, ಕೃತಕ ಬುದ್ಧಿಮತ್ತೆ ತರಬೇತಿ

syber
Published on

ಬೆಂಗಳೂರು: ವಿದ್ಯಾರ್ಥಿಗಳಿಗೆ ಸೈಬರ್ ಸುರಕ್ಷತೆ, ಭದ್ರತೆ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳ ಜ್ಞಾನವನ್ನು ತಿಳಿಸಿಕೊಡುವುದಕ್ಕಾಗಿ ವಿವಿಧ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ರಾಜ್ಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಸಿಸ್ಕೋ ಸಂಸ್ಥೆಯ ಸಹಭಾಗಿತ್ವದಲ್ಲಿ ‘ಸೈಬರ್ ಸುರಕ್ಷತೆ ಕೌಶಲ ಮತ್ತು ಸೈಬರ್ ಸುರಕ್ಷತೆ’ ಈ ಕುರಿತು ಆನ್‌ಲೈನ್ ತರಬೇತಿ ಕಾರ್ಯಕ್ರಮ ಹಾಗೂ ಲಿಂಕ್ಸ್ ೌಂಡೇಷನ್ ಸಹಯೋಗದಲ್ಲಿ ‘ಮಹಿಳೆ ಮತ್ತು ಕೃತಕ ಬುದ್ಧಿ ಮತ್ತೆ’ ಎಂಬ ಕಾರ್ಯಕ್ರಮ ಅನುಷ್ಠಾನಕ್ಕೆ ಸೂಚಿಸಿದೆ.

ಆಯ್ಕೆ ವಿದ್ಯಾರ್ಥಿಗಳದ್ದು:

15 ಗಂಟೆಗಳ ಕಾಲ ಸೈಬರ್ ಸೆಕ್ಯೂರಿಟಿ ಪರಿಚಯ ಮತ್ತು ಸೈಬರ್ ಅವಶ್ಯಕತೆಯನ್ನು 30 ಗಂಟೆಗಳ ಕಾಲ ಬೋಧನೆ ಮಾಡಲಿದೆ. ಡಿಜಿಟಲ್ ಸ್ವತ್ತುಗಳು ರಕ್ಷಿಸಲು ಅಗತ್ಯವಾದ ಮೂಲಭೂತ ಸೈಬರ್ ಸುರಕ್ಷತಾ ಜ್ಞಾನ, ಸೈಬರ್ ಸುರಕ್ಷತೆ ತತ್ವಗಳು, ಅಭ್ಯಾಸಗಳ ತಿಳಿವಳಿಕೆಯನ್ನು ನೀಡಲಿದೆ.

ಎರಡು ಕೋರ್ಸ್‌ಗಳ ಪೈಕಿ ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಆಸಕ್ತ ಅಧ್ಯಾಪಕರು ಸಹ ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆಯಬಹುದು. ಈ ಕೋರ್ಸ್ ಬೋಧನೆಗೆ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವನ್ನು ಪಡೆಯುವಂತಿಲ್ಲ. ಇದರಿಂದ ಕಾಲೇಜಿಗೆ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲವೆಂದು ತಿಳಿಸಿದ್ದಾರೆ.

ಕಾರ್ಯಕ್ರಮ ಅನುಷ್ಠಾನ ಮಾಡಲು ಸುಗಮವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯುವಂತೆ ಒಬ್ಬರು ಅಧ್ಯಾಪಕರನ್ನು ಕಾಲೇಜು ಹಂತದ ಸಮನ್ವಯಾಧಿಕಾರಿಯಾಗಿ ನೇಮಕ ಮಾಡಬೇಕು. ಪ್ರತಿ ತಿಂಗಳು ಈ ಕಾಲೇಜುಗಳಿಂದ ಪ್ರಗತಿ ವರದಿ ರೂಪಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ಮಹಿಳೆ ಮತ್ತು ಕೃತಕ ಬುದ್ಧಿ ಮತ್ತೆ ಕಾರ್ಯಕ್ರಮ

ಲಿಂಕ್ಸ್ ೌಂಡೇಷನ್ ಸಹಯೋಗದಲ್ಲಿ ‘ಮಹಿಳೆ ಮತ್ತು ಕೃತಕ ಬುದ್ಧಿ ಮತ್ತೆ’ ಎಂಬ ಕಾರ್ಯಕ್ರಮ ಅನುಷ್ಠಾನಕ್ಕೆ ಸೂಚಿಸಿದೆ. ಈ ಕಾರ್ಯಕ್ರಮವನ್ನು ಬೆಂಗಳೂರು, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಸೇರಿ ಹಲವು ಜಿಲ್ಲೆಗಳ ಆಯ್ದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಚಿತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ.

ಸಂವಹನ ಕೌಶಲ್ಯವೇ ಮೊದಲಾದ ಅಗತ್ಯ ಕೌಶಲಗಳು, ತಿಳಿವಳಿಕೆ, ವಿಶೇಷತೆಗಳನ್ನು ಪರಿಚಯಿಸಿ ಕೈಗಾರಿಕೆಗಳಿಗೆ ಪ್ರಸ್ತುತವೆನಿಸುವ ಪ್ರಮಾಣ ಪತ್ರ ನೀಡಲಿದೆ. ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯಾವುದೇ ವಿಜ್ಞಾನ, ವಾಣಿಜ್ಯ, ಕಲೆ ಮತ್ತು ಇತರೆ ಕೋರ್ಸ್‌ಗಳಲ್ಲಿ ಯಾವುದೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಈ ಕಾರ್ಯಕ್ರಮವು ಸಂಪೂರ್ಣ ಆ್ಲೈನ್ ಆಗಿದ್ದು, 20 ಗಂಟೆಗಳ ಅವಧಿಯನ್ನು ಹೊಂದಿರುತ್ತದೆ. ಈ ಕೋರ್ಸ್ ಅನುಷ್ಠಾನ ಮಾಡುವ ಜವಾಬ್ದಾರಿಯನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರು ಹೊಂದಿರಬೇಕಾಗಿರುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net