ಸೀರೆ, ಕುಕ್ಕರ್, ಸಾರಾಯಿ ಹಂಚಿಕೆಗೆ ಕಡಿವಾಣ ಹಾಕಿ

Election Distribution
ವಿಜಯಪುರ ಜಿಲ್ಲಾಡಳಿತಕ್ಕೆ ಕರವೇ ಸ್ವಾಭಿಮಾನ ಬಣದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಜಯದೇಶ ಸೂರ್ಯವಂಶಿ, ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಸೀರೆ, ಕುಕ್ಕರ್, ಸಾರಾಯಿ ಆಸೆ, ಆಮಿಷ ಒಡ್ಡುವುದನ್ನು ತಡೆಗಟ್ಟಬೇಕೆಂದು ಕರವೇ ಸ್ವಾಭಿಮಾನ ಬಣದ ಪದಾಧಿಕಾರಿ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಜಯದೇಶ ಸೂರ್ಯವಂಶಿ ಮಾತನಾಡಿ, ದೇಶದಲ್ಲಿ ಜಾತಿ ವ್ಯವಸ್ಥೆ ತೊಲಗಬೇಕು, ಭ್ರಷ್ಟಾಚಾರ ನಿಲ್ಲಬೇಕು. ರಾಮರಾಜ್ಯ ನಿರ್ಮಾಣವಾಗಬೇಕು. ಆ ನಿಟ್ಟಿನಲ್ಲಿ ಪ್ರಜೆಗಳು ಪ್ರಾಮಾಣಿಕವಾಗಿ ಮತ ಚಲಾಯಿಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಅಭ್ಯರ್ಥಿ ಆಸೆ, ಆಮಿಷವೊಡ್ಡಿರುವುದು ಕಂಡು ಬಂದಲ್ಲಿ ಕೂಡಲೇ ಅನರ್ಹಗೊಳಿಸಬೇಕೆಂದು ಒತ್ತಾಯಿಸಿದರು.

ಈಗಾಗಲೇ ಸೀರೆ, ಕುಕ್ಕರ್ ಹಾಗೂ ಸಾರಾಯಿ ಹಂಚಿಕೆ ಜೋರಾಗಿ ಸದ್ದು ಮಾಡುತ್ತಿದೆ. ಇನ್ನೂ ಚುನಾವಣೆಗೆ ಸಾಕಷ್ಟು ಸಮಯಾವಕಾಶ ಇದ್ದು, ಚುನಾವಣೆ ಅಧಿಕಾರಿಗಳು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಗಿರೀಶ ಕಲಘಟಗಿ, ಲಕ್ಷ್ಮಣ ಕಂಬಾಗಿ, ಸಿದ್ದರಾಮ ಹಳ್ಳೂರ, ಸಂಕೇತ ಪಟ್ಟಣದ, ಮಲ್ಲಿಕಾರ್ಜುನ ಬಿರಾದಾರ, ಈಶ್ವರಚಂದ್ರ ಪಡಗಣ್ಣವರ, ಡಾ. ಮಹಮ್ಮದ ಗುರಿಕಾರ, ತಿಮ್ಮನಗೌಡ ಪಾಟೀಲ, ರಾಜೇಶ್ವರಿ ಮಠಪತಿ, ಜಯಶ್ರೀ ನನಮ, ಸಾಯಿರಾಬಾನು ಸನದಿ, ಲಿಂಗರಾಜ ಬಿದರಕುಂದಿ, ರಾಜು ಪಟ್ಟಣಶೆಟ್ಟಿ, ರಾಜುಗೌಡ ಬಿರಾದಾರ, ಸತೀಶ ಆಲಗುಂಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net