

ನಾಪೋಕ್ಲು: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಯತ್ ಎಸ್‌ಜೆಎಂ, ಎಸ್‌ವೈಎಸ್, ಎಸ್‌ಎಸ್‌ಎಫ್ ಸಂಯುಕ್ತಾಶ್ರಯದಲ್ಲಿ ಮಿಲಾದ್ ಸಂದೇಶ ಜಾಥಾ ನಾಪೋಕ್ಲು ಪಟ್ಟಣದಲ್ಲಿ ಶನಿವಾರ ನಡೆಯಿತು.
ಇಲ್ಲಿನ ಸಂತೆ ಮೈದಾನದಲ್ಲಿ ಆಯೋಜಿಸಿದ ಸಭೆಯಲ್ಲಿ ಕೊಡಗು ಜಿಲ್ಲಾ ಎಸ್‌ವೈಎಸ್ ಮಾಧ್ಯಮ ಕಾರ್ಯದರ್ಶಿ ಶಾಫಿ ಸಹದಿ ಭಾಗ ವಹಿಸಿ ಮಾತನಾಡಿ, ಪ್ರವಾದಿಯನ್ನು ಪ್ರೀತಿಸುವವರು ಎಲ್ಲ ಧರ್ಮದವರೊಂದಿಗೆ ಸೌಹಾರ್ದತೆಯಿಂದ ಬಾಳಬೇಕು ಎಂದರು.
ಎಸ್‌ವೈಎಸ್ ಅಧ್ಯಕ್ಷ ಅಫಿಲ್ ಸಹದಿ ಕೊಳಕೇರಿ, ಕರ್ನಾಟಕ ಮುಸ್ಲಿಂ ಜಮಾಯತ್ತಿನ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ, ಕೊಡಗು ಜಿಲ್ಲಾ ಸಂಯುಕ್ತ ಜಮಾಯತ್ ಅಧ್ಯಕ್ಷ ಉಸೈನ್ ಸಖಾಫಿ ಎಮ್ಮೆಮಾಡು, ನಾಪೋಕ್ಲು ಮಸೀದಿಯ ಖತೀಬ ಅಬ್ದುಲ್ ಸಖಾಫಿ, ನಾಪೋಕ್ಲು ಜಮಾಯತ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ರಹಿಮಾನ್, ಕೊಟ್ಟಮುಡಿ ಜಮಾಯತ್ ಅಧ್ಯಕ್ಷ ಎ.ಎಂ.ಹಂಸ ಇತರರು ಇದ್ದರು.
7-ಎನ್ ಪಿ ಕೆ-3.