CUET-UG: ಸಿಯುಇಟಿ - ಯುಜಿ ಅಂತಿಮ ಕೀ ಉತ್ತರ ಬಿಡುಗಡೆ..!

key
Published on

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್​ಗಳ ಪ್ರವೇಶಕ್ಕೆ ಸಿಯುಇಟಿ - ಯುಜಿ ಪರೀಕ್ಷೆಯ ಅಂತಿಮ ಕೀ- ಉತ್ತರಗಳನ್ನು ಗುರುವಾರ ಪ್ರಕಟಿಸಿದ್ದು, ಶೀಘ್ರದಲ್ಲೇ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿದೆ.

ಎನ್​ಟಿಎ ಜುಲೈ 7 ರಂದು ತಾತ್ಕಾಲಿಕ ಕೀ- ಉತ್ತರಗಳನ್ನು ಪ್ರಕಟಿಸಿತ್ತು. ವೇಳಾಪಟ್ಟಿಯ ಪ್ರಕಾರ ಜೂನ್ 30ರಂದೇ ಸಿಯುಇಟಿ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ( ಎನ್​ಟಿಎ) ಪ್ರಕಟ ಮಾಡಬೇಕಿತ್ತು. ಆದರೆ ಯುಜಿಸಿ - ನೆಟ್​, ಸಿಎಸ್​ಐಆರ್​- ಯುಜಿಸಿ ನೆಟ್​ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪಗಳು ಬಂದಿದ್ದರಿಂದ ಫಲಿತಾಂಶ ತಡವಾಗಿದೆ ಎನ್ನಲಾಗಿದೆ.

63 ವಿಷಯಗಳಿಗೆ ಸಂಬಂಧಿಸಿದಂತೆ ನಡೆದ ಪರೀಕ್ಷೆಗೆ ದೇಶದಾದ್ಯಂತ 13.4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ದೇಶದ 261 ಕೇಂದ್ರ, ರಾಜ್ಯ, ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಕೋರ್ಸ್​ಗಳಿಗೆ ಪ್ರವೇಶ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net