ಇಲ್ಲಿ ಮಡಿವಂತಿಕೆ..ಅಲ್ಲಿ ವಿಪರೀತ ರೊಮ್ಯಾನ್ಸ್! ಯಾರು ಆ ನಟಿ?

keerthi
Published on

ಮುಂಬೈ: ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹವಾ ಸೃಷ್ಟಿಸಿದ ಕೀರ್ತಿ ಸುರೇಶ್ ಕೆಲವು ಕ್ರೇಜಿ ಪ್ರಾಜೆಕ್ಟ್‌ಗಳಿಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದರಲ್ಲೂ ಈಗ ಕೀರ್ತಿ ಹಿಂದಿಯ ‘ಬೇಬಿ ಜಾನ್’ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ.

ಬೇಬಿ ಜಾನ್ ನಲ್ಲಿ ಕೀರ್ತಿ ಸುರೇಶ್, ನಾಯಕ ವರುಣ್ ಧವನ್ ಜೊತೆ ವಿಪರೀತ ರೊಮ್ಯಾನ್ಸ್ ಮಾಡಲಿದ್ದಾರೆ. ಅಷ್ಟೇ ಅಲ್ಲ ವಿಪರೀತ ಲಿಪ್ಲಾಕ್‌ ಸೀನ್​ಗಳಲ್ಲಿ ಕಾಣಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

‘ಬೇಬಿ ಜಾನ್’ ತಮಿಳಿನ ‘ತೇರಿ’ ಚಿತ್ರದ ರಿಮೇಕ್ ಆಗಿದೆ. ಈ ಚಿತ್ರವನ್ನು ಕಾಲಿಸ್ ನಿರ್ದೇಶಿಸುತ್ತಿದ್ದಾರೆ. ಕೀರ್ತಿ ಸುರೇಶ್ ಪಾತ್ರವನ್ನು ಎತ್ತರಕ್ಕೆ ಏರಿಸಲಾಗುವುದು ಮತ್ತು ಪ್ರಣಯದ ಡೋಸ್ ಹೆಚ್ಚಾಗಲಿದೆ ಎನ್ನುತ್ತಾರೆ ಅವರು.

ಈ ಪಾತ್ರದ ಬೇಡಿಕೆಯಂತೆ ರೊಮ್ಯಾನ್ಸ್​ ಮಾಡಲು ಕೀರ್ತಿ ಒಪ್ಪಿಗೆ ಸೂಚಿಸಿದ್ದು, ಬಾಲಿವುಡ್‌ಗೆ ಕಾಲಿಡಲು ಈ ಬೆಡಗಿ ಈ ಸಾಹಸಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net