ನಮ್ಮದು ಪಕ್ಷ ಸಿದ್ಧಾಂತದ ಆಧಾರವೇ ಹೊರತು,ಕುಟುಂಬ ರಾಜಕಾರಣವಲ್ಲ: ಸಿ.ಟಿ.ರವಿ

ct ravi
Published on

ಬೆಂಗಳೂರು: ಪಕ್ಷದ ಸಿದ್ಧಾಂತ ಪಾಲಿಸುವ ಸಾಮಾನ್ಯ ಕಾರ್ಯಕರ್ತನೂ ಯಾವ ಎತ್ತರಕ್ಕೆ ಬೇಕಾದರೂ ಹೋಗಬಹುದು, ಕುಟುಂಬ ರಾಜಕಾರಣದಿಂದ ಅಲ್ಲ ಎಂಬುದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ರಾಜ್ಯಕ್ಕೆ ಅಮಿತ್​ ಶಾ ಭೇಟಿ ಹಿನ್ನಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಪೂರ್ವ ಸಿದ್ಧತಾ ಸಭೆ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ನಮ್ಮ ಮುಂದಿನ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ.ಮಾಧ್ಯಮಕ್ಕೆ ಹೇಳದಿರೋ ವಿಚಾರವೂ ಬಹಳ‌ ಚರ್ಚೆಯಾಗಿದೆ.ತುಂಬಾ ಜನ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.ಮುಂದೆ ಚುನಾವಣೆ ಬರಲಿದೆ ಅದರ ಬಗ್ಗೆ ಚರ್ಚೆಯಾಗಿದೆ.ಹಳೆ ಮೈಸೂರು, ಕಲ್ಯಾಣ ಕರ್ನಾಟಕ, ಕರಾವಳಿ ಭಾಗದಿಂದಲೂ ಸೇರ್ಪಡೆಯಾಗಲಿದ್ದಾರೆ ಎಂದರು.

ಯೋಗಿ ಆದಿತ್ಯನಾಥ್​ ಅಂತಹವರು ಬೆಳಕಿಗೆ ಬಂದಿದ್ದು, ಇಂತಹ ಪ್ರಯೋಗಶೀಲತೆಯಿಂದಲೇ.ಪಕ್ಷದ ಸಿದ್ಧಾಂತ ಕಾರ್ಯಕರ್ತನಾಗಿ ಯಾವ ಎತ್ತರಕ್ಕೆ ಬೇಕಾದರೂ ಹೋಗಬಹುದು ಎಂದರು.

ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅವರ ಹೇಳಿಕೆ ರಾಷ್ಟ್ರಕ್ಕೆ ಸೇರಲಿದೆ.ನಮ್ಮ ಪಕ್ಷ ಏನು ಮಾಡಲಿದೆ ಎಂಬುದರ ಪ್ರಯೋಗ ಶೀಲತೆ ಬಗ್ಗೆ ಹೇಳಿದ್ದಾರೆ. ಅವರ ಹೇಳಿಕೆ ಬಗ್ಗೆ ಯಾವುದೇ ಅರ್ಥ ಕಲ್ಪಿಸೋದು ಬೇಡ.ವ್ಯಕ್ತಿಗತವಾಗಿ ತೆಗೆದುಕೊಳ್ಳುವುದೂ ಬೇಡ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net