'ಅತಿ ದೊಡ್ಡ ಪನೌಟಿ ಯಾರು?': ಬಿಜೆಪಿ ಮುನ್ನಡೆಯ ನಡುವೆ ರಾಹುಲ್ ಗಾಂಧಿ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ctravi
Published on

ಬೆಂಗಳೂರು: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ನಾಯಕ ಸಿಟಿ ರವಿ ಭಾನುವಾರ 'ಅತಿ ದೊಡ್ಡ ಪನೌಟಿ ಯಾರು?'(ಅಪಶಕುನ) ಎಂದು ಪ್ರಶ್ನಿಸಿದರು.

ಎಕ್ಸ್ (ಹಿಂದಿನ ಟ್ವಿಟರ್) ನ ತಮ್ಮ ಪೋಸ್ಟ್‌ನಲ್ಲಿ ಟ್ವೀಟ್​ ಹಾಕಿರುವ ಸಿ.ಟಿ.ರವಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ಟ್ಯಾಗ್ ಮಾಡಿ 'ಅತಿ ದೊಡ್ಡ ಪನೌಟಿ ಯಾರು?' ಯಾರು ಎಂದು ಪ್ರಶ್ನಿಸಿದ್ದಾರೆ.

ತೆಲಂಗಾಣದಲ್ಲಿ "ಕೈ", ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಬಿಜೆಪಿ ಜಯಭೇರಿ ಭಾರಿಸಿರುವುದು ತಿಳಿದ ಸಂಗತಿಯೇ. ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುತ್ತದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ತಿಳಿಸಿದ್ದವು.‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net