ಇದೊಂದಕ್ಕೆ ಟ್ಯಾಕ್ಸ್ ಹಾಕಿಬಿಟ್ರೆ ಔರಂಗಜೇಬನ ಅಪ್ಪಂದಿರು ಅಂತ ಪ್ರೂವ್​ ಮಾಡೋಕೆ ಬೇರೇನೂ ಬೇಡ: ಸಿ.ಟಿ. ರವಿ

CT Ravi
Published on

ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲದರ ರೇಟ್​ ಜಾಸ್ತಿ ಮಾಡಿದ್ದಾರೆ. ಇವಾಗ ಗಾಳಿಯೊಂದಕ್ಕೆ ಟ್ಯಾಕ್ಸ್ ಹಾಕಿಬಿಟ್ರೆ ಇವರು ಔರಂಗಜೇಬನ ಅಪ್ಪಂದಿರು ಅಂತ ಪ್ರೂವ್​ ಮಾಡೋಕೆ ಬೇರೇನೂ ಸಾಕ್ಷಿ ಬೇಡ ಎಂದು ವಿಧಾನಪರಿಷತ್​ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ನೀರಿನ ಬಿಲ್​ ಏರಿಕೆ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಎಲ್ಲಾ ದರ ಏರಿಸಿ ಆಗಿದೆ. ಗಾಳಿ ಏಕೆ ಬಿಟ್ಟಿದ್ದೀರಾ ಅದನ್ನೂ ಏರಿಸಿಬಿಡಿ. ಗಾಳಿಗೊಂದಕ್ಕೆ ಟ್ಯಾಕ್ಸ್ ಹಾಕಿದ್ರೆ ಔರಂಗಜೇಬನ ಅಪ್ಪಂದಿರು ಅಂತ ತೋರಿಸುವುದಕ್ಕೆ ಬೇರೇನೂ ಬೇಡ. ಆತ ತಲೆಗೂ ದಂಡ ಹಾಕಿದ್ನಂತೆ. ಇವರು ಅವನ ಅಪ್ಪ ಎಂದು ತೋರಿಸೋಕೆ ಹೊರಟ್ಟಿದ್ದಾರೆ.

ಡಿ.ಕೆ. ಶಿವಕುಮಾರ್​ ಅವರೇ, ಜನವಿರೋಧಿ ಆಡಳಿತಕ್ಕೆ ಆಯಸ್ಸು ಕಮ್ಮಿ. ಲಿಕ್ಕರ್, ಸ್ಟಾಂಪ್ ಡ್ಯೂಟಿ, ಕರೆಂಟ್, ನೀರು ಹೀಗೆ ಎಲ್ಲಾ ಜಾಸ್ತಿ ಮಾಡಿದ್ದಾರೆ. ಮುಂದಿನ ಬಾರಿ ಜನ ಬುದ್ಧಿ ಕಲಿಸುವುದಕ್ಕೆ ಈಗಾಗಲೇ ತೀರ್ಮಾನ ಮಾಡಿದ್ದಾರೆ. ಒಂದೆಡೆ ಗ್ಯಾರಂಟಿ ಕೊಟ್ಟು ಮತ್ತೊಂದೆಡೆ ಎಲ್ಲರ ಜೇಬಿಗೂ ಪಿಕ್ ಪಾಕೆಟ್ ಮಾಡುತ್ತಿದ್ದೀರ. ಕಳ್ಳರು ಅಟೆನ್ಷನ್ ಡ್ರಾ ಮಾಡುತ್ತಾ 5 ರೂ. ಬೀಳಿಸಿ 500 ರೂ. ಹೊಡಿಯುತ್ತಾರೆ. ಈಗ ಕಾಂಗ್ರೆಸ್ ಸರ್ಕಾರ ಅದನ್ನೇ ಮಾಡುತ್ತಿದೆ. ಜನರಿಗೆ 2,000 ರೂ. ಕೊಟ್ಟು 20 ಸಾವಿರ ರೂ. ಹೊಡೆಯುವ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್​ ಸದಸ್ಯ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

 ಮುಡಾ ಹಗರಣದ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಚರ್ಚೆಗೆ ಪ್ರಯತ್ನ ಮಾಡಿದ್ದೇವೆ. ಎಲ್ಲಾ ಗೊತ್ತಿದ್ದ ಸಿಎಂ ಸಿದ್ದರಾಮಯ್ಯ ಅದಕ್ಕೆ ಅವಕಾಶ ನೀಡದೆ ನಿರ್ಬಂಧಿಸಿ ಪಲಾಯನ ಮಾಡಿದರು. ನಮಗೆ ಪ್ರಶ್ನೆ ಕೇಳಲು, ಅವರಿಗೆ ಉತ್ತರಿಸಲು ಅದಕ್ಕಿಂತ ದೊಡ್ಡ ವೇದಿಕೆ ಇರಲಿಲ್ಲ. ಅವರು ದಾಖಲೆ ಮೂಲಕ ಸಮರ್ಥನೆ ಮಾಡಿಕೊಳ್ಳಬಹುದಿತ್ತು. ಎಲ್ಲಾ ಸತ್ಯ ಹೊರಬರುತ್ತದೆ ಎಂದು ನಮಗೆ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net