ರಾಜ್ಯಕ್ಕೂ ಜನಸಂಖ್ಯಾ ನೀತಿ : ಸಾರ್ವಜನಿಕ ಚರ್ಚೆಗೆ ಸಿ.ಟಿ.ರವಿ ಇಂಗಿತ

Ravi
Published on

ಬೆಂಗಳೂರು : ಜನಸಂಖ್ಯೆ ಬೆಳವಣಿಗೆಗೆ ಕಡಿವಾಣ ಹಾಕಲು, ಉತ್ತರ ಪ್ರದೇಶ ಮಾದರಿಯಲ್ಲಿ, ರಾಜ್ಯದಲ್ಲಿಯೂ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವು ಪಕ್ಷಕ್ಕೆ ದೇಶಕ್ಕಿಂತ ರಾಜಕೀಯ ಮುಖ್ಯ. ಆದರೆ ನಮಗೆ ರಾಜಕೀಯ ಮುಖ್ಯವಲ್ಲ, ದೇಶ ಮುಖ್ಯ ಎಂದು ಜನಸಂಖ್ಯೆ ಮಿತಿ ವಿವಾದದ ಬಗ್ಗೆ ಸಮರ್ಥನೆ ನೀಡಿದರು.

ದೇಶಕ್ಕೆ ‌ಸ್ವಾತಂತ್ರ್ಯ ಬಂದಾಗ 30 ಕೋಟಿ ಜನಸಂಖ್ಯೆಯಿತ್ತು. ಈಗ ದೇಶದ ಜನಸಂಖ್ಯೆ 140 ಕೋಟಿ ಇದೆ. ಇಂದು ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿದೆ ಎಂದರು. ಪ್ರಾಕೃತಿಕ ಸಂಪನ್ಮೂಲ ಹೆಚ್ಚಾಗಲು ಸಾಧ್ಯವಿಲ್ಲ. ಗುಡ್ಡಗಳು‌ ಮಾಯವಾಗಿವೆ, ಅರಣ್ಯ ಮಾಯವಾಗಿವೆ. ಅಂದು 28 ಜನ ಸಾವಿನ ಸರಾಸರಿ ಇತ್ತು. ಇವತ್ತು ಸಾವಿನ ಸರಾಸರಿ ಕೇವಲ 7 ಮಾತ್ರ. ಅದಕ್ಕೆ ಜನಸಂಖ್ಯೆ ಮಿತಿ ಬಗ್ಗೆ ಚರ್ಚೆ ಹುಟ್ಟುಹಾಕಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಚರ್ಚೆ ಮಾಡದೆ ಆಪರೇಷನ್ ಮಾಡಿದೆ. ಇಂದಿರಾ ಬ್ರಿಗೇಡ್, ಸಂಜಯ್ ಬ್ರಿಗೇಡ್ ಹೆಸರಲ್ಲಿ ನಡೆದಿತ್ತು. ಆದರೆ ನಾನು ಚರ್ಚೆ ಹುಟ್ಟುಹಾಕಿದ್ದೇನೆ. ಸಾರ್ವಜನಿಕವಾಗಿ ಚರ್ಚೆಯಾಗಲಿ. ಸದನವೇ ಸಾರ್ವಭೌಮವಾದುದು. ಸದನದಲ್ಲೇ ಸಾಧಕ‌ ಬಾಧಕ ಚರ್ಚೆಯಾಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net