ಕಚ್ಚಾ ಬಾಂಬ್ ಸ್ಫೋಟ : 7 ವರ್ಷದ ಬಾಲಕ ಸಾವು

bomb1
Published on

ಕೊಲ್ಕತಾ : ಪಶ್ಚಿಮ ಬಂಗಾಳದ ಬುರ್ದ್​ವಾನ್ ನಗರದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು 7 ವರ್ಷದ ಮಗುವೊಂದು ಸಾವಪ್ಪಿರುವ ಘಟನೆ ವರದಿಯಾಗಿದೆ. ನಗರದ ಸುಭಾಸ್​ಪಾಳ್ಯ ಪ್ರದೇಶದ ಆಟದ ಮೈದಾನವೊಂದರಲ್ಲಿ ಸಂಭವಿಸಿರುವ ಈ ಘಟನೆಯಲ್ಲಿ ಮತ್ತೊಬ್ಬ 9 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ.

ಇಂದು ಬೆಳಿಗ್ಗೆ 11 ಗಂಟೆಗೆ ಮೃತ ಬಾಲಕ ಶೇಖ್ ಅಫ್ರೋಜ್ ಮತ್ತು ಗಾಯಗೊಂಡಿರುವ ಶೇಖ್ ಇಬ್ರಾಹಿಮ್ ಇಬ್ಬರೂ ತಮ್ಮ ಮನೆಯ ಬಳಿಯ ಮೈದಾನದಲ್ಲಿ ಆಟವಾಡುತ್ತಿದ್ದರು. ದಿಡೀರಾಗಿ ಅಲ್ಲಿ ಬಿದ್ದಿದ್ದ ಕಚ್ಚಾ ಬಾಂಬ್ ತುಂಬಿದ ಪ್ಯಾಕೆಟ್​ ಒಂದರ ಸಂಪರ್ಕಕ್ಕೆ ಬಂದಾಗ ಸ್ಫೋಟ ಸಂಭವಿಸಿತು ಎಂದು ಬುರ್ದ್​ವಾನ್ ಇನ್ಸ್​ಪೆಕ್ಟರ್ ಪಿಂಟು ಸಹ ಹೇಳಿದ್ದಾರೆ.

ಅಕ್ಕಪಕ್ಕದವರು ಸ್ಥಳಕ್ಕೆ ತಲುಪಿ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಅಫ್ರೋಜ್ ಆಸ್ಪತ್ರೆ ತಲುಪುವ ಮುಂಚೆಯೇ ಸಾವಪ್ಪಿದ್ದು, ಗಾಯಗೊಂಡಿದ್ದ ಇಬ್ರಾಹಿಂಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಾಂಬ್ ಪಡೆಯ ಸಹಾಯದೊಂದಿಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚುನಾವಣೆಯ ಎದುರಿಗಿರುವಾಗ ಈ ಘಟನೆ ಸಂಭವಿಸಿರುವುದು ಸ್ಥಳೀಯರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net