ಸಿಆರ್​ಪಿಎಫ್​ನ 400 ಸಿಬ್ಬಂದಿ ಹತ್ಯೆಗೆ ಉಗ್ರರು ತಂದಿದ್ದರು ಕಾರು ಬಾಂಬ್​

crpf convoy
Published on

ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ವಶಪಡಿಸಿಕೊಂಡಿದ್ದ 60 ಕೆ.ಜಿ. ಸ್ಫೋಟಕವಿದ್ದ ಕಾರು ಬಾಂಬ್​ ಅನ್ನು ಬಳಸಿ ಸಿಆರ್​ಪಿಎಫ್​ನ 400 ಯೋಧರನ್ನು ಬಲಿಪಡೆಯುವುದು ಉಗ್ರರ ಸಂಚು ಆಗಿತ್ತು ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ.

ಮೇಡ್​ ಇನ್​ ಪಾಕಿಸ್ತಾನ್​ ಕಾರು ಬಾಂಬ್​ ಬಳಸಿ, ಗುರುವಾರ ಬೆಳಗ್ಗೆ ಭಕ್ಷಿ ಸ್ಟೇಡಿಯಂ ಕ್ಯಾಂಪ್​ನಿಂದ ಜಮ್ಮುಗೆ ತೆರಳಲಿದ್ದ ಸಿಆರ್​ಪಿಎಫ್​ ಯೋಧರ ಮೇಲೆ ದಾಳಿ ನಡೆಸಲು ಜೈಷ್​ ಎ ಮೊಹಮ್ಮದ್​ ಭಯೋತ್ಪಾದನಾ ಸಂಘಟನೆಯ ಉದ್ದೇಶವಾಗಿತ್ತು ಎಂದು ಹೇಳಿವೆ.

ಸಿಆರ್​ಪಿಎಫ್​ ಯೋಧರು ಇದ್ದ ವಾಹನಗಳು ಗುರುವಾರ ಬೆಳಗ್ಗೆ 7 ಗಂಟೆಗೆ ಭಕ್ಷ ಸ್ಟೇಡಿಯಂ ಕ್ಯಾಂಪ್​ನಿಂದ ಹೊರಟು ಜಮ್ಮುಗೆ ತಲುಪಬೇಕಿತ್ತು. ಈ ವಾಹನಗಳಲ್ಲಿ ಹಿರಿಯ ಹಾಗೂ ಕಿರಿಯ ಶ್ರೇಣಿಯ ಎಲ್ಲ ಅಧಿಕಾರಿಗಳು ತೆರಳುವವರಿದ್ದರು ಎಂದು ಸಿಆರ್​ಪಿಎಫ್​ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net