ನಕ್ಸಲ್​​ ನಿಗ್ರಹ ಕಾರ್ಯಾಚರಣೆಯಲ್ಲಿ ಕಚ್ಚಾ ಬಾಂಬ್​​ ಸ್ಫೋಟ: CRPF ಸಿಬ್ಬಂದಿ ಸಾವು

CRPF
Published on

CRPF: ನಕ್ಸಲರ ವಿರುದ್ಧದ ಕಾರ್ಯಾಚರಣೆಯ ಸಮಯದಲ್ಲಿ ಕಚ್ಚಾ ಬಾಂಬ್​​​ ಸ್ಫೋಟಗೊಂಡು ಸಿಆರ್‌ಪಿಎಫ್ ಓರ್ವ ಸಿಬ್ಬಂದಿ ಮೃತಪಟ್ಟಿರುವ ಘಟನೆ ಒಡಿಶಾದ ಸುಂದರ್​​ಗಢ ಜಿಲ್ಲೆಯಲ್ಲಿ ಶನಿವಾರ (ಜೂ.14) ನಡೆದಿದೆ.

ಸ್ಫೋಟದಲ್ಲಿ ಸಿಆರ್‌ಪಿಎಫ್ 134ನೇ ಬೆಟಾಲಿಯನ್​​ ಎಎಸ್​​ಐ ಸತ್ಯಬನ್​ ಕುಮಾರ್​​ ಸಿಂಗ್​​ (34) ಅವರ ಎಡಗಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಅಲ್ಲಿ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ಮೂರು ವಾರಗಳ ಹಿಂದೆ ಮಾವೋವಾದಿಗಳು ಬ್ಯಾಂಕೊ ಕಲ್ಲು ಕ್ವಾರಿಯಿಂದ ಸುಮಾರು ಐದು ಟನ್ ಸ್ಫೋಟಕ ವಸ್ತುಗಳನ್ನು ಲೂಟಿ ಮಾಡಿದ ಪ್ರಮುಖ ಘಟನೆಯ ನಂತರ ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಅಂದಿನಿಂದ, ಕದ್ದ ವಸ್ತುಗಳನ್ನು ಪತ್ತೆಹಚ್ಚಲು ಮತ್ತು ಪ್ರದೇಶವನ್ನು ಸುರಕ್ಷಿತಗೊಳಿಸಲು ಭದ್ರತಾ ಪಡೆಗಳು ಅನೇಕ ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net