ಏರೋ ಇಂಡಿಯಾ: ಆಗಸ ನೋಡಲು ಕಿಕ್ಕಿರಿದ ಜನ!

people
Published on

ಬೆಂಗಳೂರು: ಏನಪ್ಪಾ ಇದು? ಆಕಾಶ ನೋಡಕ್ಕೂ ಜನ ಸೇರುತ್ತಾರಾ ಎಂದು ನೀವು ಕೇಳಬಹುದು. ಆದರೆ ಇದು ನಿಜ! ಇದು ನಡೆದದ್ದು ಬೆಂಗಳೂರಿನ ಯಲಹಂಕ ವಾಯುನೆಲೆ ಬಳಿ. ಇಂದಿನಿಂದ 5 ದಿನಗಳ ಕಾಲ ಏರೋ ಶೋ ನಡೆಯುತ್ತಿದ್ದು ಮೊದಲ ಮೂರು ದಿನ ಕೇವಲ ಗಣ್ಯರಿಗೆ ಹಾಗೂ ವ್ಯಾಪಾರಿಗಳಿಗೆ ಒಳಕ್ಕೆ ಪ್ರವೇಶಿಸಲು ಅನುಮತಿಸಲಾಗಿದೆ.

ಹೀಗಾಗಿ ಏರ್ ಶೋ ಕಣ್ತುಂಬಿಕೊಳ್ಳಲು ಸಾವಿರಾರು ಜನ ಯಲಹಂಕ ವಾಯುನೆಲೆಯ ಹೊರ ಭಾಗದ ಬಳಿ ಆಗಮಿಸಿದ್ದಾರೆ. ಇವರೆಲ್ಲರೂ ಯಲಹಂಕ ವಾಯುನೆಲೆ ಹೊರಗಡೆಯಿಂದ ಜನ ಏರ್ ಶೋ ವೀಕ್ಷಣೆ ಮಾಡುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುವುದರಿಂದ ಆಕಾಶ ನೋಡಲೂ ನೂಕು ನುಗ್ಗಲು ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ರಾಷ್ಟ್ರೀಯ ಹೆದ್ದಾರಿ ಹುಣಸಮಾರಮಹಳ್ಳಿ‌ಬಳಿಯ ಕೆರೆ ಕಟ್ಟೆಯ ಮೇಲೆ ಸಾವಿರಾರು ಜನ ನಿಂತಿದ್ದಾರೆ. ವಿವಿಧ ವಿಮಾನಗಳ ಪ್ರದರ್ಶನವನ್ನ ಕಣ್ತುಂಬಿಕೊಂಡು ಮೊಬೈಲ್​ನಲ್ಲಿ ದೃಶ್ಯಗಳನನ್ನು ಸೆರೆಹಿಡಿದು ಜನ ಖುಷಿ ಪಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net