

ರಾಣೆಬೆನ್ನೂರ: ಕಳೆದ ವರ್ಷದ ಬೆಳೆವಿಮೆ ಹಣ ನೀಡುವಲ್ಲಿ ಖಾಸಗಿ ವಿಮಾ ಕಂಪನಿಯವರು ಇಲ್ಲಸಲ್ಲದ ನೆಪಹೇಳಿ ರೈತರಿಗೆ ಮೋಸ ಮಾಡುತ್ತಿದ್ದು, ಕೂಡಲೇ ಬೆಳೆವಿಮೆ ಹಣ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಾಲೂಕಿನ ಇಟಗಿ ಗ್ರಾಮದ ಹರಿಹರ&ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ರೈತ ಸಂದ ಸಂಟನಾ ಕಾರ್ಯದಶಿರ್ ರವೀಂದ್ರಗೌಡ ಪಾಟೀಲ ಮಾತನಾಡಿ, ಕಳೆದ ಬಾರಿ ಸರ್ಕಾರ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿದ ಮೇಲೆ ಬೆಳೆವಿಮೆ ಮಾಡಿಸಿದ ಎಲ್ಲ ರೈತರ ಖಾತೆಗೆ ವಿಮಾ ಕಂಪನಿಯವರು ಶೇ. 25ರಷ್ಟು ಪರಿಹಾರ ಹಾಕಿದ್ದರು. ಬಾಕಿಯಿರುವ ಶೇ. 75ರಷ್ಟು ಪರಿಹಾರ ಕೊಡುವುದಾಗಿ ತಿಳಿಸಿದ್ದರು.
ಆದರೀಗ ವರ್ಷ ಕಳೆದರೂ ವಿಮಾ ಕಂಪನಿಯವರು ಹಣ ನೀಡದೆ ಮೋಸ ಮಾಡುತ್ತಿದ್ದಾರೆ. ಬೆಳೆವಿಮೆಯ ಬಾಕಿ ಹಣ ನೀಡುವಂತೆ ಕೇಳಿದರೆ, ಇಲ್ಲಸಲ್ಲದ ನೆಪಹೇಳಿ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ವಿಮಾ ಕಂಪನಿಯವರಿಗೆ ಸೂಚಿಸಿ ರೈತರಿಗೆ ಪರಿಹಾರ ಒದಗಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ಉಪ ತಹಸೀಲ್ದಾರ್ ಎಂ.ಎಚ್. ಕಡೂರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಮುಖರಾದ ನಾಗರಾಜ ಹೂಡಿ, ಸುಭಾಷಗೌಡ ರಾಮಲಿಂಗಣ್ಣನವರ, ಪ್ರಶಾಂತರಡ್ಡಿ ಯರೇಕುಪ್ಪಿ, ಮೈಲಾರಪ್ಪ ಬಿದರಿ, ಮಂಜಪ್ಪ ಶಿವಲಿಂಗಪ್ಪನವರ, ಹನುಮಂತಪ್ಪ ಗುತ್ತಲ, ಪ್ರಕಾಶ ಡೊಂಬರಮತ್ತೂರ, ಹನುಮಂತಪ್ಪ ಉಕ್ಕುಂದ, ಮಹೇಶಪ್ಪ ಕರೇಗೌಡ್ರ, ಹಾಲೇಶ ಕೆಂಚನಾಯ್ಕರ, ರುದ್ರಗೌಡ ಸಣ್ಣಗೌಡ್ರ, ರಾಮಪ್ಪ ದೇವರಮನಿ, ಚನ್ನಬಸಪ್ಪ ಮುದ್ದಿ, ಶಿದ್ದಪ್ಪ ದೇವರಮನಿ ಮತ್ತಿತರರು ಪಾಲ್ಗೊಂಡಿದ್ದರು.