

ಕುಮಟಾ: 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ತಾಲೂಕಿನ ರೈತರಲ್ಲಿ 16 ರೈತರ ಅರ್ಜಿಗಳು ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದೆ ವಿಮಾ ಸಂಸ್ಥೆಯಿಂದ ತಿರಸ್ಕೃಗೊಂಡಿವೆ.
ತಿರಸ್ಕೃತಗೊಂಡ ರೈತರ ಯಾದಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಾರ್ಯಾಲಯ, ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿ ಪ್ರದರ್ಶಿಸಲಾಗಿದೆ.
ವಿಮೆ ಅರ್ಜಿ ತಿರಸ್ಕರಣೆಗೆ ರೈತರ ಆಕ್ಷೇಪಣೆಯಿದ್ದಲ್ಲಿ ಸೂಕ್ತದಾಖಲಾತಿಯೊಂದಿಗೆ ಫೆ. 28ರೊಳಗೆ ಸಂಬಂಧಪಟ್ಟ ರೈತಸಂಪರ್ಕ ಕೇಂದ್ರಕ್ಕೆ ಸಲ್ಲಿಸಲು ಕೋರಲಾಗಿದೆ. ರೈತರಿಂದ ಆಕ್ಷೇಪಣಾ ಅರ್ಜಿ ಬಾರದಿದ್ದಲ್ಲಿ ಮಾರ್ಗಸೂಚಿಯಂತೆ ಕ್ರಮಕೈಗೊಳ್ಳಲಾಗುವುದು.
ಅಕ್ಷೇಪಣೆ ಅರ್ಜಿ ಜತೆ, ವಿಮೆಗೆ ನೋಂದಾಯಿಸಿದ ಬೆಳೆ ನಮೂದಾಗಿರುವ 2023-24ರ ಪಹಣಿ ಪತ್ರಿಕೆ ಅಥವಾ ಬೆಂಬಲಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಸೀದಿ ಅಥವಾ ವಿಮೆಗೆ ನೋಂದಾಯಿಸಿದ ಬೆಳೆಯನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಿದ್ದಲ್ಲಿ ಆ ದಾಖಲೆ ಒದಗಿಸಬೇಕು ಎಂದು ಕೃಷಿ ಇಲಾಖೆ ಪ್ರಕಟಣೆ ತಿಳಿಸಿದೆ.