ಬೆಳೆ, ಮನೆ ಹಾನಿಗೆ ಸೂಕ್ತ ಪರಿಹಾರ ಒದಗಿಸಲು ರೈತರ ಆಗ್ರಹ

22-RNR-03
Published on

ರಾಣೆಬೆನ್ನೂರ: ನಿರಂತರ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಹಾಗೂ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದ ಮಿನಿವಿಧಾನ ಸೌಧದ ಎದುರು ತಹಸೀಲ್ದಾರ್​ ಕೆ. ಗುರುಬಸವರಾಜ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಸತತವಾಗಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವುದರಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಳೆಯಿಂದ ತಾಲೂಕಿನಲ್ಲಿ ತುಂಗಭದ್ರಾ ಹಾಗೂ ಕುಮುದ್ವತಿ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಇದರಿಂದ ನದಿಪಾತ್ರದ ಜಮೀನುಗಳಲ್ಲಿ ಬೆಳೆದಿದ್ದ ಗೋವಿನಜೋಳ, ಬಾಳೆ, ಅಡಕೆ ಹಾಗೂ ಇತರ ಬೆಳೆಗಳು ನೀರು ಪಾಲಾಗಿವೆ.
ಅಲ್ಲದೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಮನೆಗಳು ಬಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ಕೈಗೊಂಡು ಬೆಳೆಯಾನಿಯಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಮನೆ ಬಿದ್ದಿರುವ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ರುದ್ರಗೌಡ ಪಾಟೀಲ, ದುರುಗಪ್ಪ ಬಾಲಬಸೂರ, ಕಿರಣ ಗುಳೇದ, ಲತವ್ವ ಲಮಾಣಿ, ಮಂಜವ್ವ ಲಮಾಣಿ, ನಾಗರಾಜ ಚಿನ್ನಿಕಟ್ಟಿ, ಗಜೇಂದ್ರ ಬಾಲಬಸೂರ, ಸುರೇಶ ಕುಲಕುಂಟೆ, ಹೊನ್ನವ್ವ ಬಾಕಿರ್, ಪುಟ್ಟಪ್ಪ ಬಾಕಿರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net