

ನವದೆಹಲಿ: ವೆಸ್ಟ್ ಇಂಡೀಸ್ ಆಲ್ರೌಂಡರ್ ಕ್ರಿಕೆಟಿಗ ಆಂಡ್ರೆ ರಸೆಲ್, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಸಂದೇಶವೊಂದನ್ನು ಕಳುಹಿಸಿದ್ದಾರೆ. ಇದು ಮುಂಬರುವ ಐಪಿಎಲ್ 2021 ಕ್ರಿಕೆಟ್ ಬಗ್ಗೆ ಅಲ್ಲ, ಬದಲಿಗೆ 'ವಾಕ್ಸಿನ್ಮೈತ್ರಿ'ಯ ಅಡಿಯಲ್ಲಿ ಭಾರತವು ಜಮಾಯ್ಕ ದೇಶಕ್ಕೆ ಕಳುಹಿಸಿರುವ ಕರೊನಾ ಲಸಿಕೆಗಳ ಬಗ್ಗೆ.
2021 ರ ಐಪಿಎಲ್ಗೆ ಕೊಲ್ಕಟಾ ನೈಟ್ ರೈಡರ್ಸ್(ಕೆಕೆಆರ್) ತಂಡದ ಸ್ಟಾರ್ ಪ್ಲೇಯರ್ ಆದ ಆಂಡ್ರೆ ರಸೆಲ್ ಅವರು ಭಾರತವು ಕರೊನಾ ಲಸಿಕೆಗಳನ್ನು ಕಳುಹಿಸಿರುವುದಕ್ಕೆ ಆತ್ಮೀಯವಾಗಿ "ಎ ಬಿಗ್ ಬಿಗ್ ಬಿಗ್ ಥ್ಯಾಂಕ್ಯೂ" ಹೇಳಿದ್ದಾರೆ. ಈ ಬಗೆಗಿನ ರಸೆಲ್ರ ವಿಡಿಯೋ ಸಂದೇಶವನ್ನು ಜಮಾಯ್ಕದ ಕಿಂಗ್ಸ್ಟನ್ನಲ್ಲಿರುವ ಭಾರತೀಯ ಹೈ ಕಮಿಷನ್ ಟ್ವಿಟರ್ನಲ್ಲಿ ಶೇರ್ ಮಾಡಿದೆ.
"ಕರೊನಾ ಆಕ್ರಮಣಕ್ಕೆ ತುತ್ತಾಗಿರುವ ಜಗತ್ತು ಸಾಮಾನ್ಯ ಪರಿಸ್ಥಿತಿಗೆ ಮರಳಬೇಕೆಂದರೆ ಲಸಿಕೆಗಳ ಪಾತ್ರ ಮಹತ್ವದ್ದು. ಈ ದೃಷ್ಟಿಯಿಂದ ಕರೊನಾ ಲಸಿಕೆ ಭಾರತದಿಂದ ಜಮಾಯ್ಕ ತಲುಪಿರುವ ಬಗ್ಗೆ ನಾವು ಪುಳಕಿತಗೊಂಡಿದ್ದೇವೆ. ಇದನ್ನು ಜಮಾಯ್ಕಾದ ಜನರು ತುಂಬ ಪ್ರಶಂಸಿಸುತ್ತಾರೆ. ಜಮಾಯ್ಕ ಮತ್ತು ಭಾರತ... ಈಗ ಸೋದರರಾಗಿದ್ದೇವೆ" ಎಂದು ಭಾವುಕರಾಗಿ ರಸೆಲ್ ಮಾತನಾಡಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ