

Child abuse: ತನ್ನ ಬಳಿ ಕ್ರಿಕೇಟ್ ಕೋಚ್ ಪಡೆಯುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕ್ರಿಕೆಟ್ ಕೋಚ್ವೊಬ್ಬರನ್ನು ದಿಯೋನಾರ್ ಪೊಲೀಸರು ಮಂಗಳವಾರ (ಆ.5) ಬಂಧಿಸಿದ್ದಾರೆ.
ಆರೋಪಿ ರಾಜೇಂದ್ರ ನಾನಾಸಾಹೇಬ್ ಪವಾರ್ (37) ಎಂದು ತಿಳಿದುಬಂದಿದೆ. ಈತ ಪೊಲೀಸರ ಗಮನಕ್ಕೆ ಬಂದಿರುವುದು ಇದೇ ಮೊದಲಲ್ಲ. 2023 ರಲ್ಲಿ ಅದೇ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಿದ್ದರು ಎನ್ನಲಾಗಿದೆ.
ಪೊಲೀಸರ ಪ್ರಕಾರ, ಬಾಲಕಿ ಘಾಟ್ಕೋಪರ್ ನಿವಾಸಿ ಎಂದು ತಿಳಿದುಬಂದಿದೆ. ಅದೇ ಊರಿನ ಗೋವಂಡಿ ಪ್ರದೇಶದ ಮೈದಾನದಲ್ಲಿರುವ ಪವಾರ್ ಅವರ ಕ್ರಿಕೆಟ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇನ್ನು ಪವಾರ್ ಈ ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡು, ಮೇ 28 ರಿಂದ ಆಗಸ್ಟ್ 4 ರ ನಡುವೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದ ಹಲವೆಡೆ ಮೂರು ದಿನ ಭಾರಿ ಮಳೆ
ಹೆಚ್ಚುತ್ತಿರುವ ಕಿರುಕುಳದ ಬಗ್ಗೆ ಬಾಲಕಿಯು ತನ್ನ ಕುಟಂಬಸ್ಥರಿಗೆ ತಿಳಿಸಿದ್ದು, ಕುಟುಂಬಸ್ಥರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ತನಿಖೆ ನಡೆಸಿದ ದಿಯೋನಾರ್ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಕಾಯ್ದೆ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪವಾರ್ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.(ಏಜೆನ್ಸೀಸ್)