ಕ್ರಿಕೆಟ್​ ಬೆಟ್ಟಿಂಗ್​, ಜೂಜಿನಲ್ಲಿ ಹಣ ಕಳೆದ; ಸಾಲಬಾಧೆ ತಾಳದೆ ಸಾವಿಗೆ ಶರಣಾದ

suicide
Published on

ಚಾಮರಾಜನಗರ: ಯುವಕನೊಬ್ಬ ಕ್ರಿಕೆಟ್​ ಬೆಟ್ಟಿಂಗ್​ ಮತ್ತು ಜೂಜಾಟದಲ್ಲಿ ತೊಡಗಿ, ಸಾಲ ಬಾಧೆಗೆ ಈಡಾಗಿ ಸಾವಿಗೆ ಶರಣಾಗಿರುವ ಪ್ರಸಂಗ ನಡೆದಿದೆ. ಚಾಮರಾಜನಗರ ಜಿಲ್ಲೆ ಮತ್ತು ತಾಲೂಕಿನ ಹರದನಹಳ್ಳಿ ಗ್ರಾಮದ ನಿವಾಸಿಯಾಗಿದ್ದ 26 ವರ್ಷ ವಯಸ್ಸಿನ ಬಂಗಾರು, ಮೃತ ದುರ್ದೈವಿ.

ಕೆಲವು ದಿನಗಳ ಹಿಂದೆ ನಡೆದ ಐಪಿಎಲ್​​ ಕ್ರಿಕೆಟ್​ ಪಂದ್ಯಾವಳಿಗೆ ಸಂಬಂಧಿಸಿದಂತೆ ಜೂಜಾಟ ನಡೆ ಹಣ ಕಳೆದುಕೊಂಡಿದ್ದ. ಸಾಲ ಬಾಧೆ ತಾಳಲಾರದೆ, ಸೋಮವಾರ ರಾತ್ರಿ ಮದ್ಯಪಾನ ಮಾಡಿ ಮನೆಗೆ ಹೋಗುವಾಗ ಪಟ್ಟಣದ ಸೋಮುವಾರಪೇಟೆ ಬಳಿಯ ಹೊರ ವಲಯದಲ್ಲಿ ಇರುವ ಮಾಳದಲ್ಲಿ ನೇಣು ಕೊರಳೊಡ್ಡಿ ಆತ್ಮಗತ್ಯೆ ಮಾಡಿಕೊಂಡ ಎಂದು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net