

ತೀರ್ಥಹಳ್ಳಿ: ದೇಶದ್ರೋಹಿ ಚಟುವಟಿಕೆಗೆ ಪೂರಕವಾಗಿರುವ ವಕ್ಫ್ ಬೋರ್ಡ್‌ಗೆ ಕಾಂಗ್ರೆಸ್ ವಿಶೇಷ ಅಧಿಕಾರ ನೀಡಿದೆ. ಮುಸ್ಲಿಮರ ಓಲೈಕೆ ಸಲುವಾಗಿಯೇ ಈ ಕಾಯ್ದೆಯನ್ನು ಸೃಷ್ಟಿ ಮಾಡಲಾಗಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ದೂರಿದರು.
9.40 ಲಕ್ಷ ಎಕರೆ ಭೂಮಿಯನ್ನು ವಕ್ಫ್ ಬೋರ್ಡ್‌ಗೆ ದಾನ ಕೊಟ್ಟವರು ಯಾರು? ಭಾರತದಲ್ಲಿ ಕೊಟ್ಟಿರುವ ಅಧಿಕಾರವನ್ನು ಯಾವ ಇಸ್ಲಾಂ ರಾಷ್ಟ್ರದಲ್ಲೂ ಇಷ್ಟರ ಮಟ್ಟಿನ ಅಧಿಕಾರ ನೀಡಿದ ಉದಾಹರಣೆ ಇಲ್ಲ. ರೈತರ ಜಮೀನು ವಕ್ಫ್ ಖಾತೆಗೆ ಸೇರಿದೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ವಿವಾದ ಭುಗಿಲೆದ್ದಿದೆ. ರಾಯಚೂರು ಜಿಲ್ಲೆ ಸಿಂಧನೂರು ಶಾಸಕರ 12 ಎಕರೆ ಜಮೀನು ವಕ್ಫ್ ಆಸ್ತಿ ಎಂದು ಹೇಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಕ್ಕರ್ ಬಾಂಬ್ ಸ್ಫೋಟ ಹಾಗೂ ರಾಮೇಶ್ವರಂ ಕೆೆ ಘಟನೆ ರೂವಾರಿಗಳು ಮತ್ತು ಇಲ್ಲಿನ ಇಸ್ಲಾಮಿಕ್ ಮಾನಸಿಕತೆಯ ವ್ಯಕ್ತಿಗಳಿಂದಾಗಿ ತೀರ್ಥಹಳ್ಳಿ ಎರಡನೇ ಭಟ್ಕಳವಾಗಿ ಪರಿವರ್ತನೆ ಆಗುತ್ತಿದೆ. ದೇಶದ ಗಮನ ಸೆಳೆದ ಎರಡು ಭಯೋತ್ಪಾದಕ ಘಟನೆಗಳಾದ ಕುಕ್ಕರ್ ಬಾಂಬ್ ಮತ್ತು ರಾಮೇಶ್ವರಂ ಕೆೆ ಬ್ಲಾಸ್ಟ್‌ನ ರೂವಾರಿಗಳಾದ ಶಾರಿಕ್ ಮತ್ತು ಮತೀನ್ ಇಲ್ಲಿಯವರೇ ಆಗಿದ್ದಾರೆ. ನಂದಿತಾ ಕೊಲೆ ಪ್ರಕರಣದ ಹಿಂದೆಯೂ ಭಯೋತ್ಪಾದಕರಿದ್ದರು. ಸರಿಯಾದ ತನಿಖೆ ನಡೆದರೆ ಇಸ್ಲಾಮಿಕ್ ಮಾನಸಿಕತೆಯ ದೊಡ್ಡ ವ್ಯಕ್ತಿಗಳೂ ಬಯಲಿಗೆ ಬರುತ್ತಾರೆ ಎಂದರು.
2011ರಲ್ಲಿ ಮಂಜುನಾಥ್ ಎಂಬಾತನ ಹತ್ಯೆಯಾದಾಗ ಯಾಸಿನ್ ಭಟ್ಕಳ್ ಬಗ್ಗೆ ಹೇಳಿದ್ದೆ. ಆದರೆ ಆ ಬಗ್ಗೆ ಸರಿಯಾದ ತನಿಖೆ ನಡೆದಿರಲಿಲ್ಲ. ಈ ಪ್ರಕರಣ ಹೊರಬಾರದಿರಲು ಪ್ರಭಾವಿಗಳ ಕೈವಾಡವಿತ್ತು. ಇದೀಗ ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನೀಯ. ಬಾಂಗ್ಲಾದ ಮಾಜಿ ಪ್ರಧಾನಿ ಷೇಕ್ ಹಸೀನಾ ಅಧಿಕಾರದಿಂದ ಇಳಿಯುತ್ತಿದ್ದಂತೆ ಪಾಕ್ ಪ್ರೇರಣೆಯಿಂದ ಹಿಂದುಗಳು ಮತ್ತು ಭಾರತದ ವಿರುದ್ಧ ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರಿದ್ದರು.