

ಚಂಡೀಗಡ: ಇಲ್ಲಿ ನಡೆಯುತ್ತಿರುವ ಧಾರ್ಮಿಕ ಕಾಯಕ್ರಮವೊಂದರಲ್ಲಿ ಪಟಾಕಿ ಸಿಡಿದು ಇಬ್ಬರು ಮೃತ ಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ತರ್ನ್ತರಾನ ಜಿಲ್ಲೆಯ ಪಾಹು ಗ್ರಾಮದಲ್ಲಿ ನಾಗರ್ ಕೀರ್ತನಾ ಎಂಬ ಕಾರ್ಯಕ್ರಮ ನಡೆದಿತ್ತು. ಅಲ್ಲಿ ವಿಧವಿಧವಾದ ಪಟಾಕಿಗಳನ್ನು ಸಿಡಿಸಲಾಗುತ್ತಿತ್ತು.
ಮೆರವಣಿಗೆಯ ಸಮಯದಲ್ಲಿ ಪಟಾಕಿ ಸಿಡಿಸುವ ವೇಳೆ ಕಿಡಿಯೊಂದು ಹಾರಿ ಸಮೀಪದಲ್ಲೇ ಅಪಾರ ಪ್ರಮಾಣದ ಪಟಾಕಿ ತುಂಬಿದ್ದ ಟ್ರ್ಯಾಕ್ಟರ್ನಲ್ಲಿ ಬಿದ್ದು ಅವಘಡ ಸಂಭವಿಸಿದೆ.
ಪಂಜಾಬ್ನ ಐಜಿಪಿ ಎಸ್ಪಿಎಸ್ ಪಾರ್ಮರ್ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಅಂದು ಅಂದಾಜಿಸಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)