

Patna: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ (Bihar Election) 18 ಜನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ-ಲೆನಿನಿಸ್ಟ್) [ಸಿಪಿಐ (ಎಂಎಲ್)] , ಅಚ್ಚರಿ ಎಂಬಂತೆ ತನ್ನ ಪಟ್ಟಿಯನ್ನು ಹಿಂತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಮಹಾಘಟಬಂಧನದೊಳಗಿನ ಇತರ ಪಕ್ಷಗಳ ಸ್ಥಾನಗಳ ಕುರಿತು ಇನ್ನೂ ಚರ್ಚೆಗಳು ಮುಂದುವರೆದಿರುವುದರಿಂದ ಪಟ್ಟಿಯನ್ನು ಹಿಂದಕ್ಕೆ ಪಡೆಯಲಾಗಿದೆ ಮತ್ತು ಎಲ್ಲಾ ಕ್ಷೇತ್ರಗಳನ್ನು ಒಳಗೊಂಡ ಪರಿಷ್ಕೃತ ಪಟ್ಟಿಯನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿರಲಿ ವಿಜೃಂಭಣೆ
ಕ್ಷೇತ್ರ ಅಭ್ಯರ್ಥಿ
ತರಾರಿ (196) – ಮದನ್ ಸಿಂಗ್ ಚಂದ್ರವಂಶಿ
ಅಗಿಯಾವ್ SC (195) – ಶಿವಪ್ರಕಾಶ್ ರಂಜನ್
ಅರಾ (194) – ಕಯಾಮುದ್ದೀನ್ ಅನ್ಸಾರಿ
ಡುಮ್ರಾನ್ (201) - ಅಜಿತ್ ಕುಮಾರ್ ಸಿಂಗ್ ಅಲಿಯಾಸ್ ಅಜಿತ್ ಕುಶ್ವಾಹಾ
ಕರಕಟ್ (213) – ಅರುಣ್ ಸಿಂಗ್
ಅರ್ವಾಲ್ (214) - ಮಹಾನಂದ್ ಸಿಂಗ್
ಘೋಸಿ (217) - ರಾಂಬಾಲಿ ಸಿಂಗ್ ಯಾದವ್
ಪಾಲಿಗಂಜ್ (190) - ಸಂದೀಪ್ ಸೌರಭ್
ಫುಲ್ವಾರಿ (188) - ಗೋಪಾಲ್ ರವಿದಾಸ್
ದಿಘಾ (181) – ದಿವ್ಯಾ ಗೌತಮ್
ದರೋಲಿ (107) - ಸತ್ಯದೇವ್ ರಾಮ್
ಜಿರಾಡೆ (106) - ಅಮರಜೀತ್ ಕುಶ್ವಾಹಾ
ದರೌಂಡ (109) - ಅಮರನಾಥ ಯಾದವ್
ಭೋರೆ (103) - ಜಿತೇಂದ್ರ ಪಾಸ್ವಾನ್
ಸಿಕ್ತಾ (09) – ವೀರೇಂದ್ರ ಪ್ರಸಾದ್ ಗುಪ್ತಾ
ವಾರಿಸ್ನಗರ (132) - ಫೂಲ್ಬಾಬು ಸಿಂಗ್
ಕಲ್ಯಾಣಪುರ (131) – ರಂಜಿತ್ ರಾಮ್
ಬಲರಾಂಪುರ್ (65) - ಮಹಬೂಬ್ ಆಲಂ
ಮಹಾಘಟಬಂಧನ್ನಲ್ಲಿ ಅನೇಕ ಪಕ್ಷಗಳಿರುವುದರಿಂದ ಸೀಟು ಹಂಚಿಕೆ ಕುರಿತಾದ ಚರ್ಚೆಗಳು ಮುಂದುವರೆದಿದ್ದು, ಈ ನಡುವೆಯೇ ಪಟ್ಟಿ ಬಿಡುಗಡೆ ಮತ್ತು ಹಿಂತೆಗೆದುಕೊಳ್ಳುವಿಕೆ ಬಂದಿದೆ. ಕೆಲವು ಪ್ರಮುಖ ಕ್ಷೇತ್ರಗಳ ಬಗ್ಗೆ ಇನ್ನೂ ಮಾತುಕತೆಗಳು ನಡೆಯುತ್ತಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸೀಟು ಹಂಚಿಕೆ ಸಮಸ್ಯೆ ಬಗೆಹರಿದ ನಂತರ, ಸಿಪಿಐ (ಎಂಎಲ್) ಮುಂದಿನ ದಿನಗಳಲ್ಲಿ ಸಂಪೂರ್ಣ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ. ಪ್ರಸ್ತುತ ಪ್ರಚಾರದ ಭರಾಟೆ ನೋಡಿದರೆ ಎಲ್ಲ ಪಕ್ಷಗಳ ನಡುವೆ ತುರುಸಿನ ಸ್ಪರ್ಧೆ ಕಂಡುಬರುತ್ತಿದೆ. ಆಡಳಿತರೂಢ ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿ(ಯು) ಉತ್ತರ ಬಿಹಾರದಲ್ಲಿ ತನ್ನದೇ ಆದ ಬಲ ಹೊಂದಿದ್ದು, ಇದು ಸರ್ಕಾರದ ನೆಮ್ಮದಿಗೆ ಕಾರಣವಾಗಿದೆ. 243 ವಿಧಾನಸಭಾ ಸ್ಥಾನಗಳಲ್ಲಿ 140 ಸ್ಥಾನಗಳನ್ನು ಹೊಂದಿರುವ ಈ ಪ್ರದೇಶ, ರಾಜ್ಯದ ರಾಜಕೀಯದಲ್ಲಿ ತನ್ನದೇ ಆದ ಪ್ರಬಾವ ಹೊಂದಿದೆ.
243 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ. ಮೊದಲ ಹಂತದ ಚುನಾವಣೆ ನಡೆಯುವ 121 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನಾಂಕವಾಗಿದ್ದರೆ, ಎರಡನೇ ಹಂತದಲ್ಲಿ 122 ಸ್ಥಾನಗಳಿಗೆ ಅಕ್ಟೋಬರ್ 20 ಕೊನೆಯ ದಿನವಾಗಿದೆ.(ಏಜೆನ್ಸೀಸ್)