

ನಗರ್ಲೆ: ನಂಜನಗೂಡು ತಾಲೂಕು ನಗರ್ಲೆ ಪಶು ಚಿಕಿತ್ಸಾಲಯ ವ್ಯಾಪ್ತಿಯ ಗೋಣಹಳ್ಳಿ ಗ್ರಾಮದಲ್ಲಿ ಮಂಗಳವಾರ ಜಾನುವಾರುಗಳಿಗೆ 4ನೇ ಸುತ್ತಿನ ಕಾಲು ಬಾಯಿ ಜ್ವರದ ಲಸಿಕೆ ನೀಡಲಾಯಿತು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಿಬ್ಬಂದಿ ಗ್ರಾಮದ ಮನೆ ಮನೆಗೆ ತೆರಳಿ 300ಕ್ಕೂ ಹೆಚ್ಚು ರಾಸುಗಳಿಗೆ ಲಸಿಕೆ ಹಾಕಿದ್ದು ಗಮನ ಸೆಳೆಯಿತು.
ಪಶುವೈದ್ಯಾಧಿಕಾರಿ ಡಾ. ಬಿ.ಟಿ ವಿಜೇತ್ ಮಾತನಾಡಿ, ಗ್ರಾಮದ ವ್ಯಾಪ್ತಿಯಲ್ಲಿ 10 ದಿನದ ಅವಧಿಯಲ್ಲಿ ಒಟ್ಟು ಎರಡು ಸಾವಿರ ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಕಾಲು ಬಾಯಿ ಜ್ವರದಿಂದ ರಾಸುಗಳನ್ನು ರಕ್ಷಿಸಲು ಇದು ಪರಿಣಾಮಕಾರಿ ಚಿಕಿತ್ಸೆಯಾಗಿದೆ. ರೈತರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದರು.