

ಚೆನ್ನೈ: ಐಐಟಿ ಮದ್ರಾಸ್ನ ನಿರ್ದೇಶಕ ವೀಝಿನಾಥನ್ ಕಾಮಕೋಟಿ ಗೋಮೂತ್ರದ ಔಷಧೀಯ ಗುಣಗಳ ಕುರಿತು ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಈ ವಿಷಯ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ.
ವೀಝಿನಾಥನ್ ರ ಹೇಳಿಕೆಯನ್ನು ಖಂಡಿಸಿರುವ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ‘ಐಐಟಿ ಮದ್ರಾಸ್ ನಿರ್ದೇಶಕರನ್ನು ಏಮ್ಸ್ ಆಸ್ಪತ್ರೆ ನಿರ್ದೇಶಕರಾಗಿ ಮಾಡಬೇಕು. ಅವರು ಗೋಮೂತ್ರದ ಕುರಿತು ಹೇಳುವ ಮಾತುಗಳನ್ನು ನಂಬುವ ಜನರಿರುವ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಕಿಡಿ ಕಾರಿದ್ದಾರೆ.
ಸಂಕ್ರಾಂತಿ ದಿನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವೀಝುನಾಥನ್ ‘ಸಂತರೊಬ್ಬರಿಗೆ ಅನಾರೋಗ್ಯ ಕಾಡಿದಾಗ ಅವರು ಗೋಮೂತ್ರ ಸೇವಿಸಿದ 15 ನಿಮಿಷದಲ್ಲೇ ಹುಷಾರಾಗಿದ್ದರು. ಗೋಮೂತ್ರದಲ್ಲಿ ಔಷಧೀಯ ಗುಣಗಳಿವೆ’ ಎಂದು ತಿಳಿಸಿದ್ದರು. ಗೋಮೂತ್ರ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಬಳಿಕ ತಮಿಳುನಾಡಿನ ಬಿಜೆಪಿ ಘಟಕ ವೀಝುನಾಥನ್ ಅವರಿಗೆ ಬೆಂಬಲಿಸಿದ್ದು, ಗೋಮೂತ್ರ ನಮ್ಮ ಸಾಂಪ್ರದಾಯಿಕ ಔಷಧಿಗಳಲ್ಲಿ ಒಂದಾಗಿದೆ. ಈಗಲೂ ಸಾಕಷ್ಟು ಜನರು ಗೋಮೂತ್ರ ಬೆರೆಸಿದ ಔಷಧಿಗಳನ್ನು ಬಳಸುತ್ತಿದ್ದಾರೆ ಎಂದು ತಿಳಿಸಿದೆ.