video/ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ...' ಹಾಡಿಗೆ ಕುಣಿದು ಕುಪ್ಪಳಿದ ಕರೊನಾ ಸೋಂಕಿತರು

covid hospital-dance
Published on

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ

ಮತದಲ್ಲಿ ಮೇಲ್ಯಾವುದೋ

ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ

ಕೀಳ್ಯಾವ್ದು ಮೇಲ್ಯಾವುದೋ...

ಈ ಹಾಡು ಮಂಡ್ಯದ ಕೋವಿಡ್​ ಆಸ್ಪತ್ರೆಯಲ್ಲಿ ರಿಂಗಣಿಸುತ್ತಿದೆ. ಹೌದು, ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ...' ಹಾಡಿಗೆ ಹೆಜ್ಜೆ ಹಾಕುತ್ತ ಕಾಲ ಕಳೆಯುತ್ತಿದ್ದಾರೆ.

ಡಾ.ರಾಜ್‌ಕುಮಾರ್‌ ಅಭಿನಯದ 'ಸತ್ಯ ಹರಿಶ್ಚಂದ್ರ' ಸಿನಿಮಾದ ಎವರ್ ಗ್ರೀನ್‌ ಹಾಡು 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ'. ಈ ಹಳೆಯ ಹಾಡು ಜನರ ಮನದಲ್ಲಿ ಹಸಿರಾಗೆ ಇದೆ. ಇದರ ತಾಳಕ್ಕೆ ಕುಣಿದವರಿಲ್ಲ. ಇದೀಗ ಕರೊನಾ ಸಂಕಷ್ಟದ ಸಮಯದಲ್ಲೂ ಬೇಸರ ಕಳೆಯಲು ಸೋಂಕಿತರು ಈ ಹಾಡಿನ ಮೊರೆ ಹೋಗಿದ್ದಾರೆ.

ಕರೊನಾ ಲಕ್ಷಣ ಇಲ್ಲದ, ಸೋಂಕು ದೃಢಪಟ್ಟಿರುವ ರೋಗಿಗಳ ವಾರ್ಡ್​ನಲ್ಲಿ ಈ ಹಾಡಿಗೆ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಸೋಂಕಿತರ ಆತ್ಮವಿಶ್ವಾಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net