

ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 96,141ಕ್ಕೆ ಏರಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 58,417 ಆಗಿದೆ. ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ನಿನ್ನೆಗೆ ಹೋಲಿಸಿದರೆ ಕೆಳಗಿಳಿದಿದೆ. ನಿನ್ನೆ 2,403 ಜನರು ಡಿಸ್ಚಾರ್ಜ್ ಆಗಿದ್ದರೆ, ಇಂದು ಇವರ ಪ್ರಮಾಣ 2,088 ಆಗಿದೆ.
ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ನಿನ್ನೆ 72 ಜನರು ಮೃತಪಟ್ಟಿದ್ದರೆ, ಇಂದು ಆ ಸಂಖ್ಯೆ 82 ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿನ ಪ್ರಮಾಣ 1,878 ಕ್ಕೆ ತಲುಪಿದೆ. ಮರಣ ಪ್ರಮಾಣ ಶೇ.1.95 ಆಗಿದೆ. ಚೇತರಿಕೆ ಪ್ರಮಾಣ ಶೇ.37.28 ಆಗಿದೆ.
ರಾಜಧಾನಿಯಲ್ಲಿ ಇಂದಿನ ಒಟ್ಟು ಕೇಸ್ಗಳು 1,950. ನಿನ್ನೆ ಈ ಸಂಖ್ಯೆ 2,063 ಆಗಿತ್ತು. ಒಟ್ಟು ಪ್ರಕರಣಗಳ ಸಂಖ್ಯೆ 45,453 ಕ್ಕೆ ಮುಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 33,155 ಆಗಿದೆ. ನಿನ್ನೆಗೆ ಹೋಲಿಸಿದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ ಕಡಿಮೆಯಾಗಿದ್ದು ಇಂದು 647 ಜನರು ಚೇತರಿಕೆ ಕಂಡಿದ್ದಾರೆ. ನಿನ್ನೆ ಇವರ ಪ್ರಮಾಣ 686 ಇತ್ತು.
ಇನ್ನು, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ನಿನ್ನೆಗಿಂತ ಒಂದು ಹೆಚ್ಚಾಗಿದೆ. ನಿನ್ನೆ 30 ಜನರು ಮೃತಪಟ್ಟಿದ್ದರೆ, ಇಂದು 29 ಜನ ಸಾವಿಗೀಡಾಗಿದ್ದಾರೆ. ಇದರೊಂದಿಗೆ ರಾಜಧಾನಿಯಲ್ಲಿ ಕೋವಿಡ್ನಿಂದಾದ ಒಟ್ಟು ಸಾವಿನ ಪ್ರಮಾಣ 892ಕ್ಕೆ ತಲುಪಿದೆ.
ಇಂದು 33,565 ಜನರಿಗೆ ಕೋವಿಡ್ ತಪಾಸಣೆ ನಡೆಸಲಾಗಿದ್ದು, ಒಟ್ಟಾರೆ ತಪಾಸನೆಗೊಳಗಾದವರ ಸಂಖ್ಯೆ 11,76827 ಆಗಿದೆ.
ಜಿಲ್ಲೆಗಳ ಕೋವಿಡ್ ವಿವರ