ರಾಜ್ಯದಲ್ಲಿಂದು 839 ಜನರು ಚೇತರಿಕೆ; ಏರುತ್ತಿದೆ ಗುಣಮುಖರಾಗುತ್ತಿರುವವರ ಸಂಖ್ಯೆ

Corona India
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಕಳೆದ ಹಲವು ದಿನಗಳಿಂದ ನಿರಂತರವಾಗಿ 2 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ವರದಿಯಾಗುತ್ತಿವೆ.

ಕಳೆದ 24 ತಾಸುಗಳಲ್ಲಿ ರಾಜ್ಯದಲ್ಲಿ ಒಟ್ಟು 2,738 ಹೊಸ ಕೋವಿಡ್​ ಪ್ರಕರಣಗಳು ಕಂಡು ಬಂದಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 41,581ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ (ಜು.13) ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಸೋಂಕಿತರು ಗುಣಮುಖರಾಗುತ್ತಿರುವ ಪ್ರಮಾಣದಲ್ಲೂ ಭಾರಿ ಏರಿಕೆಯಾಗಿರುವುದು ಕೂಡ ಆಶಾದಾಯಕ ಅಂಶವಾಗಿದೆ. ಒಟ್ಟು 839 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು ಚೇತರಿಕೆ ಕಂಡವರು 16,248. ಮೃತರ ಸಂಖ್ಯೆ 73 ಆಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 757ಕ್ಕೆ ಮುಟ್ಟಿದಂತಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 24,572 ಆಗಿದೆ.

ಬೆಂಗಳೂರಿನಲ್ಲಿ ಕಳೆದ 24 ತಾಸುಗಳಲ್ಲಿ ಹೊಸ ಪ್ರಕರಣಗಳು 1,315 ಆಗಿದ್ದು, ಒಟ್ಟಾರೆ ಕೋವಿಡ್​ ರೋಗಿಗಳು 19,702 ಈ ಪೈಕಿ ಸಕ್ರಿಯವಾಗಿರುವ ಪ್ರಕರಣಗಳು 15,052 ಆಗಿವೆ. ಮೃತರ ಸಂಖ್ಯೆ 47 ಹೆಚ್ಚಾಗುವ ಮೂಲಕ ರಾಜಧಾನಿಯಲ್ಲಿ ಒಟ್ಟು 321 ಜನರು ಮೃತಪಟ್ಟಿದ್ದಾರೆ.

ಜಿಲ್ಲಾವಾರು ಅಂಕಿ-ಅಂಶಗಳ ಪಟ್ಟಿ ಇಲ್ಲಿದೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net