ಕರ್ನಾಟಕ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ; ಬಳ್ಳಾರಿಯಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು

health bulletin
Published on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕರೊನಾ ವೈರಸ್​ ಸೋಂಕಿಗೆ ತುತ್ತಾದವರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಮಂಗಳವಾರದ ವೇಳೆಗೆ ಸೋಂಕಿತರ ಸಂಖ್ಯೆ ಮೂರಂಕಿ ದಾಟುವ ಆತಂಕ ಮೂಡಿದೆ.

ಸೋಂಕಿತರ ಪೈಕಿ 5 ಮಂದಿ ಸಂಪೂರ್ಣ ಗುಣಮುಖರಾಗಿರುವುದು ಸಮಾಧಾನಕರ ಸಂಗತಿಯಾಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಒಂದೇ ಕುಟುಂಬದ ಮೂವರಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಸೋಂಕು ತಗುಲಿರುವ ಶಂಕೆಯಲ್ಲಿ ಪ್ರಯೋಗಾಲಯಕ್ಕೆ ಇವರೆಲ್ಲರ ಗಂಟಲ ದ್ರವದ ಮಾದರಿಯನ್ನು ರವಾನಿಸಲಾಗಿತ್ತು. ಇದೀಗ ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಆರೋಗ್ಯ ಇಲಾಖೆ ಸೋಮವಾರ ಬಿಡುಗಡೆ ಮಾಡಿರುವ ಜಿಲ್ಲಾವಾರು ಸೋಂಕಿತರ ಪಟ್ಟಿ ಇಂತಿದೆ:

ಬೆಂಗಳೂರು- 41, ಮೈಸೂರು- 12, ಚಿಕ್ಕಬಳ್ಳಾಪುರ- 8, ದಕ್ಷಿಣ ಕನ್ನಡ- 7, ಉತ್ತರ ಕನ್ನಡ- 7, ಕಲಬುರಗಿ- 3, ಬಳ್ಳಾರಿ- 3, ದಾವಣಗೆರೆ- 3, ಉಡುಪಿ- 3, ತುಮಕೂರು 2, ಕೊಡಗು- 1, ಧಾರವಾಡ-1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net