18ರಂದು 18 ರಾಜ್ಯಗಳಲ್ಲಿ ಕರೊನಾ ಸೋಂಕು ಹೆಚ್ಚಳ! ಅಮೆರಿಕವನ್ನೂ ಹಿಂದಿಕ್ಕುತ್ತಾ ಭಾರತ?

Corona
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕು ಪ್ರಕರಣ ಮತ್ತೆ ಏರುತ್ತಿದ್ದು, ಭಾರತದ 18 ರಾಜ್ಯಗಳಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್​-19 ಪ್ರಕರಣ ಹೆಚ್ಚಾಗಿರುವುದು ಸೆ. 18ರ ಶುಕ್ರವಾರ ವರದಿಯಾಗಿದೆ.

ಶುಕ್ರವಾರದ ವರದಿ ಪ್ರಕಾರ ದೇಶದಲ್ಲಿ ಹೊಸದಾಗಿ 96,424 ಹೊಸ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 5.21 ದಶಲಕ್ಷ ತಲುಪಿದೆ. ಕೋವಿಡ್​-19 ಕೇಸ್​​ನ ತೀವ್ರ ಹೆಚ್ಚಳದಿಂದಾಗಿ ವಿಶ್ವಮಟ್ಟದಲ್ಲಿ ಕರೊನಾಬಾಧಿತ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಅಮೆರಿಕದಲ್ಲಿ ಸದ್ಯ ಕರೊನಾ ಪ್ರಕರಣ ಸಂಖ್ಯೆ 6.67 ದಶಲಕ್ಷಕ್ಕೂ ಹೆಚ್ಚಿದ್ದು, ಇನ್ನು ಕೆಲವೇ ದಿನಗಳಲ್ಲಿ ಭಾರತ ಅಮೆರಿಕವನ್ನೂ ಹಿಂದಿಕ್ಕುವ ಲಕ್ಷಣಗಳು ಗೋಚರಿಸಿವೆ.

ಕಳೆದ 24 ಗಂಟೆಗಳಲ್ಲಿ ಕರೊನಾ ಸೋಂಕು ಪ್ರಕರಣಗಳಲ್ಲಿ ತೀವ್ರ ಹೆಚ್ಚಳ ಕಂಡುಬಂದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ, ಕೇರಳ, ಬಿಹಾರ, ದೆಹಲಿ, ಗೋವಾ, ತೆಲಂಗಾಣ, ಜಮ್ಮು ಮತ್ತು ಕಾಶ್ಮೀರ, ಲಡಾಕ್​, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ಒಡಿಶಾ, ಪಂಜಾಬ್​, ರಾಜಸ್ಥಾನ, ಉತ್ತರಾಖಂಡ, ಉತ್ತರಪ್ರದೇಶ, ಪಶ್ಚಿಮ ಬಂಗಾಳಗಳು ಸೇರಿವೆ. ಈ ರಾಜ್ಯಗಳಿಂದ 24 ಗಂಟೆಗಳಲ್ಲಿ ಒಟ್ಟು 7,778 ಪ್ರಕರಣಗಳು ವರದಿಯಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net