

ಕನಕಪುರ : ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ವತಿಯಿಂದ ಎಂ.ಜಿ.ರಸ್ತೆಯ ಸುಮುಖ್ ಪಾರ್ಟಿ ಹಾಲ್‌ನಲ್ಲಿ ಬುಧವಾರ ಕೋವಿಡ್-19 ನಿಯಂತ್ರಣ ಜಾಗೃತಿ ಮತ್ತು ಸದಸ್ಯರ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧ್ಯಕ್ಷ ಎಚ್.ರಾಜೇಶ್ ಮಾತನಾಡಿ, ಕರೋನ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಎಲ್ಲರೂ ಒಂದಾಗಿ ಕೈಜೋಡಿಸಿ ಕರೋನ ನಿಯಂತ್ರಣಕ್ಕೆ ಮುಂದಾಗಬೇಕಿದೆ. ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಕೋವಿಡ್-19 ಲಸಿಕೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು. ಪದಾಧಿಕಾರಿಗಳು ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ವಾರಿಯರ್ಸ್‌ಗಳಂತೆ ಮುನ್ನಡೆದು, ನಾಗರೀಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದ ಅವರು, ಕರೊನಾ ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಸಾರ್ವಜನಿಕರ ಸಹಕಾರವಿದ್ದರೆ ಇದು ಸಾಧ್ಯವಾಗಲಿದೆ ಎಂದು ಹೇಳಿದರು.
ಪದಾಧಿಕಾರಿಗಳು: ತಾಲೂಕು ಅಧ್ಯಕ್ಷರಾಗಿ ಕೆ.ಆರ್.ಸುರೇಶ್, ಉಪಾಧ್ಯಕ್ಷ ದೇವರಾಜು, ಪ್ರಧಾನ ಕಾರ್ಯದರ್ಶಿ ಪರಮೇಶ್, ಸಹಕಾರ್ಯದರ್ಶಿ ಮಹೇಶ್, ಕಾನೂನು ಸಲಹೆಗಾರ ಶ್ರೀನಿವಾಸ್, ಕಾರ್ಮಿಕ ವಿಭಾಗದ ಕೆ.ಎನ್.ನವೀನ್, ಆರೋಗ್ಯ ವಿಭಾಗದ ಕೋಟೆ ಕಿರಣ್ ಅವರನ್ನು ನೇಮಕ ಮಾಡಲಾಯಿತು.