

ಕೋಲಾರ: ನಗರೋತ್ಥಾನ ಯೋಜನೆ-4ರಡಿಯಲ್ಲಿ ಸುಮಾರು 17 ಕೋಟಿ ರೂ. ವೆಚ್ಚದ ಕಾಮಗಾರಿ ಪಡೆದಿಕೊಂಡಿರುವ ಗುತ್ತಿಗೆದಾರ ಕೆಲಸ ಪೂರ್ಣಗೊಳಿಸದೆ ವಿಳಂಬ ಮಾಡುತ್ತಿದ್ದು, ಒಂದು ಕಾಲವಕಾಶ ನೀಡಿ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಲು ತೀರ್ಮಾನಿಸಲಾಯಿತು.
ನಗರದಲ್ಲಿನ ನಗರಸಭೆಯಲ್ಲಿ ಲಕ್ಷಿ$್ಮದೇವಮ್ಮ ಅಧ್ಯಕ್ಷತೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸದಸ್ಯರ ಸಾಮಾನ್ಯ ಸಭೆಯಲ್ಲಿ, ಯರಗೋಳ್ ಯೋಜನೆಯಡಿ ಮನೆಮನೆಗೆ ಶೇ.100 ರಷ್ಟು ನೀರು ಹರಿಸುವುದು ಸೇರಿ ವಿವಿಧ ವಿಷಯಗಳಿಗೆ ಒಮ್ಮತದಿಂದ ರ್ನಿಣಯ ಕೈಗೊಳ್ಳಲಾಯಿತು.
ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ನಗರೋತ್ಥಾನ ಯೋಜನೆಯಡಿ ಗುತ್ತಿಗೆದಾರ 17 ಕೋಟಿ ರೂ. ವೆಚ್ಚದ ಟೆಂಡರ್ ಪಡೆದುಕೊಂಡಿದ್ದಾರೆ. ನಗರದಲ್ಲಿ ಇದುವರೆಗೆ ಶೇ.50ರಷ್ಟೂ ಕೆಲಸ ಮಾಡಿಲ್ಲ. ಇಲ್ಲಿ ವ್ಯವಸ್ಥೆ ಏನಾಗುತ್ತಿದೆ? ಎಂದು ಕಿಡಿಕಾರಿದರು. 18 ತಿಂಗಳ ಅವಧಿಯಲ್ಲಿ ಕೆಲಸ ಮುಗಿಸಬೇಕು ಅಂತ ಷರತ್ತು ಇದೆ. ಆದರೆ 25 ತಿಂಗಳು ಮುಗಿದರೂ ಕೆಲಸ ಮುಗಿದಿಲ್ಲ, ಇದಕ್ಕೆ ಒಂದು ಅಂತ್ಯ ಕಾಣಬೇಕಾಗಿದೆ. ರಸ್ತೆಗಳು ಹಾನಿಯಾಗಿವೆ, ಜನ ಪ್ರತಿಭಟಿಸುತ್ತಿದ್ದಾರೆ. ಕೇಳುವ ಪ್ರಶ್ನೆಗೂ ಉತ್ತರಿಸಲಾಗುತ್ತಿಲ್ಲ, ಗುತ್ತಿಗೆದಾರರನ್ನು ಈ ಕೂಡಲೇ ಕಪು$್ಪಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ನಗರಸಭೆ ಇಂಜನಿಯರ್, ಕಾಮಗಾರಿ ವಿಳಂಬ ಸಂಬಂಧ ಈಗಾಗಲೇ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಸಭೆಯ ತೀರ್ಮಾನದಂತೆ ಒಂದು ತಿಂಗಳು ಗಡವು ನೀಡಿ, ಕಪು$್ಪಪಟ್ಟಿಗೆ ಸೇರಿಸಲು ಕ್ರಮವಹಿಸಲಾಗುವುದು ಎಂದೂ ತಿಳಿಸಿದಾಗ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಾಗದಿರಲಿ:
ಬೇಸಿಗೆಕಾಲ ಸಮೀಪಿಸುತ್ತಿದ್ದು, ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಬೇಕು. ವಾರ್ಡ್ಗಳಲ್ಲಿನ ಕೊಳವೆಬಾವಿಗಳು ಕೆಟ್ಟು ಹೋಗಿದ್ದರೆ ರಿಪೇರಿ ಮಾಡಿಸಲು ಸದಸ್ಯರು, ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ನಿರ್ದೇಶಿಸಿದರು.
ಸದಸ್ಯರ ರಾಕೇಶ್ ಮಾತನಾಡಿ, ಯರಗೋಳ್ ಯೋಜನೆ ಉದ್ಘಾಟನೆಯಾಗಿದೆ, ಇದರಿಂದ ಬಂಗಾರಪೇಟೆ, ಮಾಲೂರು, ಕೋಲಾರ ನಗರಕ್ಕೆ ನೀರು ಸಬರಾಜು ಮಾಡಲಾಗುತ್ತಿದ್ದು, ಡ್ಯಾಂ ಸಮೀಪದ ಪಂಪ್ ಹೌಸ್ ನಿರ್ವಹಣೆ ಯಾರು ಮಾಡಬೇಕು? ಎಂಬ ಗೊಂದಲ ಇದೆ ಎಂದು ಸಭೆಯಲ್ಲಿ ಗಮನಕ್ಕೆ ತಂದರು.
ಇನ್ನು ನಗರ ಭಾಗಕ್ಕೆ ಸಂಪೂರ್ಣವಾಗಿ ನೀರು ಪೂರೈಸುತ್ತಿಲ್ಲ, ನೆಯಿಲ್ಲದೆ ಪೈಪ್ಲೈನ್ ಮಾಡಲಾಗುತ್ತಿದೆ. ಇರುವ ಪಂಪ್ ಹೌಸಗಳನ್ನು ಬಿಟ್ಟು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಕೇವಲ ದುಂದುವೆಚ್ಚ ಮಾಡುವ ಕೆಲಸಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯಿಸಿ, ಪಟ್ಟಣ, ನಗರ ಭಾಗದ ಉದ್ದೇಶಕ್ಕಾಗಿ ಯರಗೋಳ್ ಯೋಜನೆ ಜಾರಿಗೆ ತರಲಾಗಿದೆ. ಸಿಬ್ಬಂದಿಗೆ ಎರಡ್ಮೂರು ತಿಂಗಳು ನಿಭಾಯಿಸಿ, ಸಚಿವ ಬೈರತಿ ಸುರೇಶ್ ಅವರ ಅಧ್ಯೆಯಲ್ಲಿ ಸಭೆ ಕರೆದು, ಸರ್ಕಾರದಿಂದಲೇ ಕ್ರಮವಹಿಸುವಂತೆ ಒತ್ತಾಯಿಸೋಣ ಎಂದು ತಿಳಿಸಿದರು. ಇದಕ್ಕೆ ಎಲ್ಲ ಸದಸ್ಯರು ಬೆಂಬಲ ಸೂಚಿಸಿದರು.
ಸದಸ್ಯ ಪ್ರವಿಣ್ಗೌಡ ಮಾತನಾಡಿ, ಯರಗೋಳ್ ಯೋಜನೆ ಜಾರಿಯಾಗಿದ್ದು, ಮನೆ ಮನೆಗೆ ನೀರು ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಯೋಜನೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದ ಸಮಸ್ಯೆಗಳು ಉಂಟಾಗಿವೆ ಎಂದರು.
ಸಭೆಯಲ್ಲಿ ಉಪಾಧ್ಯೆ ಸಂಗೀತಾ ಜಗದೀಶ್, ಪೌರಾಯುಕ್ತ ಪ್ರಸಾದ್ ಉಪಸ್ಥಿತರಿದ್ದರು.
* ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ನಗರದ ವ್ಯಾಪ್ತಿ ಹೆಚ್ಚಾಗುತ್ತಿದೆ, ಮುಳಬಾಗಿಲಿನಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಫುಟ್ಪಾತಿನಿಂದ ತೆರವುಗೊಳಿಸಿ ಪ್ರತ್ಯೇಕ ವ್ಯವಸ್ಥೆ ಮಾಡಲು ತೀಮಾರ್ನ ಕೈಗೊಂಡಿದ್ದಾರೆ. ಕೋಲಾರದಲ್ಲೂ ಇದೇ ರೀತಿ ತೀಮಾರ್ನ ಕೈಗೊಂಡರೆ ಅನುಕೂಲವಾಗುತ್ತದೆ. ಇದರಿಂದಾಗಿ ನಗರದಲ್ಲಿ ಸ್ವಚ್ಛತೆ ಕಪಾಡುವುದರ ಜತೆಗೆ ಬಡವರ ಆರ್ಥಿಕ ಪರಿಸ್ಥಿತಿಯೂ ಸುಧಾರಣೆಯಾಗುತ್ತದೆ. ಸಭೆಗಳ ಉದ್ದೇಶ ಈಡೇರಬೇಕು, ಮಾತನಾಡಿ, ಹೋದರೆ ಏನರ್ಥ ? ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಕೊತ್ತೂರು ಮಂಜುನಾಥ್ , ಫುಟ್ಪಾತ್ ಮೇಲೆ ಅಂಗಡಿಗಳನ್ನು ಇಟ್ಟುಕೊಳ್ಳಲು ಯಾರಾದರು ಹೇಳಿದ್ದರಾ?, ಅರಿವು ಮೂಡಿಸಿ ಖಾಲಿ ಮಾಡಿಸಲು ಹೇಳಬೇಕು. ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಮೂರು ಟ್ರಾ$್ಯಕ್ ಇದ್ದರೂ ಬಳಕೆ ಆಗುತ್ತಿರೋದು ಕೇವಲ ಒಂದು ಲೈನ್ ಮಾತ್ರ, ಉಳಿದ ಜಾಗದಲ್ಲಿ ಲಾರಿಗಳು, ಗೂಡ್ಸ್ ವಾಹನಗಳ ನಿಲ್ದಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿವೈಎಸ್ಪಿ ಎಚ್.ಎಂ.ನಾಗ್ತೆ ಮಾತನಾಡಿ, ಟ್ರಾಫಿಕ್ ನಿವಾರಣೆಗೆ ಬೀದಿಬದಿ ಅಂಗಡಿಗಳು ಸಹ ಕಾರಣವಾಗಿವೆ. ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಸುಗಮ ಸಂಚಾರಕ್ಕೆ ಅನುವು ಆಗುವಂತೆ ಕ್ರಮವಹಿಸಲಾಗುವುದು. ಆಗ ಸಂಚಾರಿ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಸಹಕಾರಿಯಾಗುತ್ತದೆ ಎಂದರು.
* ಕ್ರೀಡಾಂಗಣಕ್ಕೆ ಹೆಸರಿಡಲು ಪರವಿರೋಧ
ನಗರದಲ್ಲಿನ ಒಳಾಂಗಣ ಕ್ರೀಡಾಂಗಣಕ್ಕೆ ಹೆಸರು ನಾಮಕಾರಣ ಮಾಡುವ ಬಗ್ಗೆ ಪ್ರಸ್ತಾಪ ಬಂದಾಗ ಯಾರ ಹೆಸರು ಇಡಬೇಕು ಎಂಬುದರ ಬಗ್ಗೆ ಪರ ವಿರೋಧ ಚರ್ಚೆಯಾಯಿತು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಮಾತನಾಡಿ, ರಾಜ್ಯ ಸರ್ಕಾರದ ಸುತ್ತೋಲೆಯಂತೆ ಸಾಹಿತಿ, ಸಮಾಜ ಕೊಡುಗೆ ನೀಡಿರುವ, ಕ್ರೀಡಾ ಪಟುಗಳ ಸೇರಿದಂತೆ ಗಣ್ಯರ ಹೆಸರಿಡಬಹುದು, ಹೆಸರನ್ನು ಅಂತಿಮ ಮಾಡಿ ಪತ್ರ ಕಳುಹಿಸಿದರೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು ಎಂದು ತಿಳಿಸಿದರು. ಆಗ ಸದಸ್ಯ ಪ್ರಸಾದ್ ಬಾಬು ಮಾತನಾಡಿ, ರಾಜಮಾತೆ ಹೆರಡಿಸಬೇಕು, ಈ ಬಗ್ಗೆ ನಾನು ಅಜೆಂಡಾಗೆ ವಿಷಯ ಸಹ ನೀಡಿದ್ದೇನೆ ಎಂದರು. ಆಗ ಮಧ್ಯ ಪ್ರವೇಶಿಸಿದ ರಾಕೇಶ್, ಕ್ರೀಡಾಂಗಣಕ್ಕೆ ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ, ಮಾಸ್ತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಹೆಸರಿಡಬೇಕು ಎಂದು ಮನವಿ ಮಾಡಿದರು. ನಿವೃತ್ತ ಐಎಎಸ್ ಅಧಿಕಾರಿ ಸಿ.ಮುನಿಸ್ವಾಮಿ ಅವರಿಗೆ ಕ್ರೀಡೆಯ ಬಗ್ಗೆ ಬಹಳ ಅಸಕ್ತಿ ಇತ್ತು, ಅವರ ಹೆಸರಿಡಲು 2010ರಲ್ಲಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು ಎಂದು ಮುರಳಿಗೌಡ ಹೇಳಿದರು.
* ಕೋಲಾರಮ್ಮ ಕೆರೆ ಸ್ವರೂಪಕ್ಕೆ ಹಾನಿ,
ವಿಜಯವಾಣಿ ವರದಿ ಪ್ರಸ್ತಾಪ
ಕೋಲಾರ ನಗರ ಜೀವನಾಡಿಯಾಗಿರುವ ಕೋಲಾರಮ್ಮ ಕರೆಯ ಸ್ವರೂಪವನ್ನೇ ಅಭಿವೃದ್ಧಿ ಹೆಸರಿನಲ್ಲಿ ಕೆಲವರು ಹಾಳು ಮಾಡಿದ್ದಾರೆ. ಕೆಲಸ ಶುರು ಮಾಡುವ ಮುನ್ನ ನಗರಸಭೆಯಿಂದ ಪೂರ್ವಾನುಮತಿ ಪಡೆದುಕೊಂಡಿಲ್ಲ. ಕೆರೆಗಳನ್ನು ಉಳಿಸಬೇಕಾದವರೂ ಮೌನಕ್ಕೆ ಒಳಗಾಗಿದ್ದು, ಗುತ್ತಿಗೆ ಪಡೆದುಕೊಂಡಿರುವ ಮಲ್ಲೆಗೆವಾಡ್ ಮಾಲೀಕರ ವಿರುದ್ಧ ಎ್ಐಆರ್ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಾರಸ್ಸು ಮಾಡಬೇಕು ಎಂದು ಸದಸ್ಯ ಪ್ರವಿಣ್ ಗೌಡ ಒತ್ತಾಯಿಸಿದರು. ಇದಕ್ಕೆ ಸದಸ್ಯ ಸೂರಿ ಧ್ವನಿಗೂಡಿಸಿ, ಇನ್ಫೋಸಿಸ್ ಸಂಸ್ಥೆಯವರ ಹೆಸರು ಹಾಳು ಮಾಡಲು ಗುತ್ತಿಗೆದಾರ ಮುಂದಾಗಿದ್ದಾನೆ. ಕೆರೆಯನ್ನು ಏನು ಮಾಡಬೇಕು ಎಂಬುದನ್ನು ಮೊದಲು ಸದಸ್ಯರು ಸೇರಿ ನಾಗರಿಕರಿಗೆ ತಿಳಿಸಬೇಕು, ಆನಂತರವೇ ಕೆಲಸ ಶುರು ಮಾಡಬೇಕು ಎಂದು ಸಲಹೆ ನೀಡಿದರು. ಮತ್ತೋರ್ವ ಸದಸ್ಯ ಎಸ್.ಆರ್.ಮುರಳಿಗೌಡ ಮಾತನಾಡಿ, ಹೂಳು ಉಪಯೋಗಿಸಲು ಆಗುತ್ತದೋ? ಇಲ್ಲವೋ? ಎಂಬುದರ ಬಗ್ಗೆ ಯಾರು ಬೇಕಾದರು ಹೇಳುತ್ತಾರೆ. ಮಳೆ ಬಂದರೆ ನೀರು ಹರಿದು ಹೋಗುವುದಿಲ್ಲ. ಈ ಬಗ್ಗೆ ವಿಜಯವಾಣಿ ದಿನ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಆನಂತರ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಅರ್ಹರಲ್ಲದ ಸಂಸ್ಥೆಗೆ ಗುತ್ತಿಗೆ ನೀಡಿದ್ದು, ಡಿಪಿಆರ್ ಮಾಡೇ ಇಲ್ಲ ಎಂದು ಹೇಳಿದರು.
ಇದಕ್ಕೆ ಕೆರೆ ಸಂರಕ್ಷಣಾ ಪ್ರಾಧಿಕಾರದ ಇಂಜನಿಯರ್ ರಂಗಯ್ಯ ಬಳಗೇರ್ ಉತ್ತರಿಸಿ, ಈ ಬಗ್ಗೆ ಈಗಾಗಲೇ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿತ್ತು, ಶೀರ್ದಲ್ಲೇ ಪಿಪಿಟಿ ಪ್ರದರ್ಶನ ಏರ್ಪಡಿಸಲಾಗುವುದು ಎಂದು ತಿಳಿಸಿದರು. ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಲಕ್ಷ್ಮೀದೇವಮ್ಮ , ಸದಸ್ಯರು ಹೇಳಿದ ಹಾಗೆ ಮಾಡಬೇಕು, ಅಲ್ಲಿಯ ತನಕ ಕೆಲಸ ಸ್ಥಗಿತಗೊಳಿಸಿ ಎಂದು ತಾಕೀತು ಮಾಡಿದರು.
* ಉಪ್ಪು ಕತೆ ಕೇಳಲು ಬಂದಿಲ್ಲ
ಸಾಮಾನ್ಯ ಸಭೆ ಎಂದರೆ ವಿಷಯವಾರು ಚರ್ಚೆ ಮಾಡಬೇಕು, ಸದಸ್ಯಿಗೇನು ಕೆಲಸ ಇಲ್ಲದೆ ಬಂದು ಇಲ್ಲಿ ಕುಳಿತಿಲ್ಲ, ಜನರ ಸಮಸ್ಯೆಗಳು ಚರ್ಚೆಯಾಗಲಿ ಮೊದಲು, ಇಲ್ಲಿ ಉಪ್ಪು ಕತೆಗಳನ್ನು ಕೇಳಿಸಿಕೊಂಡು ಇರಲು ಬರಬೇಕಾ ಎಂದು ಸದಸ್ಯೆ ನಾರಾಯಣಮ್ಮ ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೆ ಗರಂ ಆದ ಅಧ್ಯೆ ಲಕ್ಷಿ$್ಮದೇವಮ್ಮ, ಇಲ್ಲಿನ ಚರ್ಚೆಯಾಗುವ ವಿಷಯಗಳ ಬಗ್ಗೆ ಚರ್ಚಿಸಲು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಲಾಗಿದೆ. ಸಮಸ್ಯೆ ಇದ್ದರೆ ಹೇಳಿ, ಇಲ್ಲದಿದ್ದರೆ ಸುಮ್ಮನಿರಿ ಎಂದರು. ಹಾಗೆನಾದರು ಇದ್ದರೆ ಸಭೆ ಮುನ್ನ ಅಥವಾ ಸಭೆ ನಂತರ ಚರ್ಚೆ ಇಟ್ಟುಕೊಳ್ಳಿ ಅಜೆಂಡಾ ಪಾಲನೆ ಮಾಡಿ ಎಂದು ಕಿವಿಮಾತು ಹೇಳಿದರು.