ಆಪಲ್ ಸಂಸ್ಥೆಗೆ 1 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದ ಕೋರ್ಟ್

Ukraine slams Apple for calling Crimea part of Russia 28 NOV 19
Published on

ಬೆಂಗಳೂರು: 1 ಲಕ್ಷ ಪರಿಹಾರ ಪಾವತಿಸುವಂತೆ ಆಪಲ್ ಇಂಡಿಯಾ ಮತ್ತು ಅದರ ಅಧಿಕೃತ ಸೇವಾ ಕೇಂದ್ರಕ್ಕೆ ಬೆಂಗಳೂರು ನಗರ ಗ್ರಾಹಕ ನ್ಯಾಯಾಲವು ಆದೇಶಿಸಿದೆ.


2021 ರ ಅಕ್ಟೋಬರ್‌ನಲ್ಲಿ ಅವೆಜ್ ಖಾನ್ ಎಂಬುವವರು ಒಂದು ವರ್ಷದ ವಾರಂಟಿಯೊಂದಿಗೆ ಬಂದ ಐೆನ್ ೧೩ ಅನ್ನು ಖರೀದಿಸಿದರು. ಫೋನ್‌ನ ಬ್ಯಾಟರಿ ಮತ್ತು ಹೊಚ್ಚಹೊಸ ಫೋನ್‌ನ ಸ್ಪೀಕರ್ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿತು. ಇದರಿಂದ ಖಾನ್ ಫೋನ್ ಅನ್ನು ಇಂದಿರಾನಗರದಲ್ಲಿರುವ ಐಪ್ಲಾನೆಟ್ ಕೇರ್ ಸೆಂಟರ್‌ಗೆ ನೀಡಿದರು. ಸೇವಾ ಕೇಂದ್ರದ ಸಿಬ್ಬಂದಿ ಕೆಲವು ದಿನಗಳ ನಂತರ ಖಾನ್‌ಗೆ ಕರೆ ಮಾಡಿ ಅವರ ಫೋನ್ ಸರಿಪಡಿಸಲಾಗಿದೆ ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು. ಅದರಂತೆ ಹೋಗಿ ಫೋನ್ ಅನ್ನು ಪರಿಶೀಲಿಸಿದಾಗ, ಬ್ಯಾಟರಿ ಮತ್ತು ಸ್ಪೀಕರ್‌ನಲ್ಲಿನ ಸಮಸ್ಯೆ ಹಾಗೆ ಇರುವುದು ಕಂಡು ಬಂತು. ಈ ಕುರಿತು ಸಿಬ್ಬಂದಿ ಬಳಿ ಸಮಸ್ಯೆ ಪ್ರಸ್ತಾಪಿಸಿ, ಸರಿಯಾಗಿ ಫೋನ್ ಸರಿಯಾಗಿ ರಿಪೇರಿ ಮಾಡುವಂತೆ ತಿಳಿಸಿದರು.


ಎರಡು ವಾರಗಳ ನಂತರ, ಸೇವಾ ಕೇಂದ್ರದ ಸಿಬ್ಬಂದಿ ಕರೆ ಮಾಡಿ ನಿಮ್ಮ ಫೋನ್‌ನಲ್ಲಿ ಅಂಟು ತರಹದ ವಸ್ತು ಪತ್ತೆಯಾಗಿದೆ. ಸಮಸ್ಯೆಯು ವಾರಂಟಿ ನೀತಿಯ ಅಡಿಯಲ್ಲಿ ಬರುವುದಿಲ್ಲ ಮತ್ತು ಅದನ್ನು ಸರಿಪಡಿಸಲು ಅವರು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.
ಖಾನ್ ಅವರು ಆಪಲ್ ಇಂಡಿಯಾಗೆ ಮೇಲ್ ಮೂಲಕ ಸಮಸ್ಯೆಯನ್ನು ವಿವರಿಸಿದರು. ಆದರೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಬೇಸರಗೊಂಡ ಖಾನ್ ಆಪಲ್ ಇಂಡಿಯಾ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿ ಅವರಿಗೆ ಕಾನೂನು ನೋಟಿಸ್ ಕಳುಹಿಸಿದರು. ಬೆಂಗಳೂರಿನ ಶಾಂತಿನಗರದಲ್ಲಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಅನ್ಯಾಯದ ವ್ಯಾಪಾರದ ಬಗ್ಗೆ ದೂರು ದಾಖಲಾಗಿತ್ತು. ಆದರೆ ಅದರ ಪ್ರತಿವಾದದಲ್ಲಿ, ಆಪಲ್ ಇಂಡಿಯಾದ ವಕೀಲರು ದೂರಿನಲ್ಲಿ ಸತ್ಯಾಂಶಗಳ ಕೊರತೆಯಿದೆ ಮತ್ತು ಹಾನಿಯನ್ನು ’ಆಕಸ್ಮಿಕ’ ಎಂದು ಕರೆದರು. ಆದರೆ, ಗ್ರಾಹಕರಿಗೆ ಉಂಟಾದ ತೊಂದರೆಗಾಗಿ ಹೆಚ್ಚುವರಿ ೨೦೦೦೦ ಜತೆಗೆ ಪರಿಹಾರವಾಗಿ ೭೯,೯೯೯ ಪಾವತಿಸಲು ನ್ಯಾಯಾಲಯವು ಕಂಪನಿಗೆ ಆದೇಶಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net