ಸೋಡಿಯಮ್​ ಬ್ಲ್ಯಾಸ್ಟ್ ಕೇಸ್​; BiggBoss ಮಾಜಿ ಸ್ಫರ್ಧಿ ಡ್ರೋನ್​ ಪ್ರತಾಪ್​ಗೆ ಜಾಮೀನು ಮಂಜೂರು

Drone Prathap
Published on

ತುಮಕೂರು: ಕೃಷಿ ಹೊಂಡದಲ್ಲಿ ಸೋಡಿಯಮ್​ ಬ್ಲ್ಯಾಸ್ಟ್​ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್​ಬಾಸ್ (BiggBoss)​ ಸೀಸನ್​ 10ರ ಸ್ಫರ್ಧಿ ಡ್ರೋನ್​ ಪ್ರತಾಪ್​ಗೆ (hap) ಮಧುಗಿರಿ ಸೆಷನ್ಸ್​ ಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ವಿಜ್ಞಾನ ಪ್ರಯೋಗದ ಹೆಸರಿನಲ್ಲಿ ವಿಡಿಯೋವೊಂದನ್ನ ಪೋಸ್ಟ್​ ಮಾಡಿದ್ದ ಪ್ರತಾಪ್​ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜನಕಲೋಟಿಯ ಕೃಷಿ ಹೊಂಡದಲ್ಲಿ ಸೋಡಿಯಮ್​ ಎಸೆದು ಅದು ಬ್ಲಾಸ್ಟ್​ ಆಗುವ ವಿಡಿಯೋ ಮಾಡಿದ್ದರು. ಬಳಿಕ ಇದನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

Drone Prathap

ವಿಡಿಯೋ ವೈರಲ್​ ಆಗುತ್ತಿದ್ದಂತೆ ಸುಮೊಟೋ ಪ್ರಕರಣ ದಾಖಲಿಸಿಕೊಂಡ ಮಿಡಿಗೇಶಿ ಪೊಲೀಸರು ಪ್ರತಾಪ್​ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವೂ ಡಿಸೆಂಬರ್​ 26ರವರೆಗೆ ಪ್ರತಾಪ್​ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಪೊಲೀಸರು ಪ್ರತಾಪ್​ರನ್ನು ಮಧುಗಿರಿ ಜೈಲಿನಲ್ಲಿ ಇರಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಪ್ರತಾಪ್​ ಮನವಿಯನ್ನು ಪುರಸ್ಕರಿಸಿದ ಕೋರ್ಟ್​ ಬೇಲ್​ ಮಂಜೂರು ಮಾಡಿದೆ. ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net