ಕಬ್ಬಿಣ, ಸಿಗರೇಟ್‌ನಿಂದ ಸುಟ್ಟು ಅಪ್ರಾಪ್ತ ವಯಸ್ಕ ಮನೆಕೆಲಸದಾಕೆಯ ಭೀಕರ ಹತ್ಯೆ; Couple ಅರೆಸ್ಟ್​ ಆಗಿದ್ದೆ ರೋಚಕ

Tamilnadu Police
Published on

ಚೆನ್ನೈ: ಅಪ್ರಾಪ್ತ ವಯಸ್ಕ (Minor) ಮನೆ ಕೆಲಸದಾಕೆಯನ್ನು (Maid) ಕಾಯಿಸಿದ ಕಬ್ಬಿಣದ ಸಲಾಕೆ ಹಾಗೂ ಸಿಗರೇಟಿನಿಂದ ಸುಟ್ಟು ದಂಪತಿಗಳಿಬ್ಬರು (Couple) ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದಿದೆ.

ಚೆನ್ನೈನ ಅಮಿಂಜಿಕರೈ ಪ್ರದೇಶದ ಮೆಹ್ತಾ ನಗರದಲ್ಲಿ ಈ ಘಟನೆ ನಡೆದಿದ್ದು, ದಂಪತಿ (Couple) ಅಪ್ರಾಪ್ತಳ ಶವವನ್ನು ಟಾಯ್ಲೆಟ್​ನಲ್ಲಿ ಇರಿಸಿ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ದಂಪತಿ (Couple) ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬಂಧಿತರನ್ನು ಮೊಹಮ್ಮದ್ ನಿಶಾದ್ ಮತ್ತು ನಾಸಿಯಾ ಎಂದು ಗುರುತಿಸಲಾಗಿದ್ದು, ಅಪ್ರಾಪ್ತೆಯು ಸಾಯುವ ಮೊದಲು ಆಕೆಗೆ ಕಾಯಿಸಿದ ಕಬ್ಬಿಣದ ಸಲಾಕೆ ಹಾಗೂ ಸಿಗರೇಟಿನಿಂದ ಸುಡಲಾಗಿದೆ. ಆಕೆಯ ದೇಹದಲ್ಲಿದ್ದ ಕಲೆಗಳು ದಂಪತಿ ನೀಡಿರುವ ಚಿತ್ರಹಿಂಸೆಗೆ ಪ್ರಮುಖ ಸಾಕ್ಷಿಯಾಗಿದೆ. ಆಕೆಯ ಶವವನ್ನು ಮನೆಯ ಟಾಯ್ಲೆಟ್​ನಲ್ಲಿ ಇರಿಸಿ ಆರೋಪಿಗಳಿಬ್ಬರು (Couple) ಎಸ್ಕೇಪ್​ ಆಗಲು ಯತ್ನಿಸಿದ್ದರು. ಈ ವಿಚಾರ ತಿಳಿದ ಅಧಿಕಾರಿಗಳು ಕೂಡಲೇ ಅವರನ್ನು ಬಂಧಿಸಿದ್ದಾರೆ. 

ಮೃತ ಬಾಲಕಿಯೂ ತಂಜಾವೂರಿನವರಾಗಿದ್ದು, ಆಕೆಗೆ ತಂದೆ ಇಲ್ಲ ಎಂದು ತಿಳಿದು ಬಂದಿದೆ. ಆಕೆಯ ತಾಯಿಗೆ ವಿಚಾರವನ್ನು ತಿಳಿಸಲಾಗಿದ್ದು, ಸದ್ಯ ಬಾಲಕಿಯ ಮೃತದೇಹವನ್ನು ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net