ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರೋ ಈ ವೆಡ್ಡಿಂಗ್ ಕಾರ್ಡ್ ನೋಡಿದ್ರಾ?

wed card
Published on

ಬೆಂಗಳೂರು: 'ಮದುವೆ' ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳಬಹುದಾದ ಕ್ಷಣವಾಗಿದೆ. ಹಾಗಾಗಿಯೇ ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಚಿಕ್ಕ ಚಿಕ್ಕ ವಿಷಯಗಳಿಗೂ ಸಂಪೂರ್ಣ ಗಮನ ನೀಡುತ್ತಾರೆ. ಡ್ರೆಸ್ ನಿಂದ ಹಿಡಿದು ಊಟ, ಅಲಂಕಾರದಿಂದ ಕಾರ್ಯಕ್ರಮ ಹೀಗೆ ಎಲ್ಲದಕ್ಕೂ ವಿಶೇಷ ಗಮನ ನೀಡಲಾಗುತ್ತದೆ. ಆದರೆ ಬಹುತೇಕರು ಮದುವೆ ಕಾರ್ಡ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಆದರೆ ಕೆಲವರು ಮಾತ್ರ ಇದನ್ನೂ ವಿಶೇಷವಾಗಿಸಲು ಪ್ರಯತ್ನಿಸುತ್ತಾರೆ. ನಿಜ ಹೇಳಬೇಕೆಂದರೆ ಅನೇಕ ಜನರು ಕಾರ್ಡ್ ನೋಡಿದ ನಂತರ ಮದುವೆಗೆ ಹೋಗಲು ನಿರ್ಧರಿಸುತ್ತಾರೆ. ಇದೀಗ ಅಂತಹುದೇ ಒಂದು ಮದುವೆ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮದುವೆ ಕಾರ್ಡ್ ವೈರಲ್ ಆಗಲು ಕಾರಣ ಇಲ್ಲಿದೆ.

ಯಾಕೆ ವೈರಲ್ ಆಗುತ್ತಿದೆ? 
ನೀವು ಇದುವರೆಗೆ ಅನೇಕ ಮದುವೆ ಕಾರ್ಡ್‌ಗಳನ್ನು ಸ್ವೀಕರಿಸಿರಬೇಕು. ಕೆಲವು ಕಾರ್ಡ್‌ಗಳು ಸರಳವಾಗಿರುತ್ತವೆ ಮತ್ತೆ ಕೆಲವು ಸುಂದರವಾಗಿರುತ್ತದೆ. ಆದರೆ ವಧು ಮತ್ತು ವರರ ವೃತ್ತಿ ತಿಳಿಸುವ ಕಾರ್ಡ್ ಅನ್ನು ನೀವು ಎಂದಾದರೂ ನೋಡಿದ್ದೀರಾ? ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವೆಡ್ಡಿಂಗ್ ಕಾರ್ಡ್ ನ ವಿಶೇಷತೆ ಏನೆಂದರೆ, ನೋಡಿದ ತಕ್ಷಣ ಇಬ್ಬರ ವೃತ್ತಿ ಏನು ಎಂಬುದು ಗೊತ್ತಾಗುತ್ತದೆ. ಈ ಕಾರಣಕ್ಕೆ ಈ ಮದುವೆ ಕಾರ್ಡ್ ಸಾಕಷ್ಟು ವೈರಲ್ ಆಗುತ್ತಿದೆ. ಮದುವೆ ಕಾರ್ಡ್‌ನ ಅರ್ಧಭಾಗದಲ್ಲಿ ಮಿಲಿಟರಿ ಸಮವಸ್ತ್ರದ ವಿನ್ಯಾಸವಿದೆ ಮತ್ತು ಇನ್ನೊಂದು ಬದಿಯಲ್ಲಿ ವೈದ್ಯರ ಕೋಟ್‌ನ ವಿನ್ಯಾಸವಿದೆ. ಅದರೊಂದಿಗೆ ಇಬ್ಬರ ಹೆಸರನ್ನೂ ಬರೆಯಲಾಗಿದೆ.

ಈ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) @Shaiibi0 ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಬರೆಯುವ ತನಕ, 6 ಲಕ್ಷದ 36 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net