ಸಾಲಕ್ಕೆ ಹೆದರಿ ಪ್ರಾಣ ಕಳೆದುಕೊಂಡ ದಂಪತಿ; ಬಾವಿಗೆ ಹಾರಿ ಸಾವು..

Couple
ದಂಪತಿ ಕೆಲಸಕ್ಕಿದ್ದ ತೋಟ
Published on

ಮೈಸೂರು: ಮಾಡಿದ್ದ ಸಾಲ ತೀರಿಸಲಾಗದೆ ಚಿಂತೆಗೆ ಒಳಗಾದ ದಂಪತಿ, ಅದೇ ಭಯದಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಇಂಥದ್ದೊಂದು ದುರಂತ ಪ್ರಕರಣ ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಭೇರ್ಯ ಸಮೀಪದ ಸಂಬ್ರವಳ್ಳಿ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಬೆಟ್ಟಪ್ಪ (50), ರುಕ್ಮಿಣಿ (43) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಗ್ರಾಮದ ಜಮೀರ್ ಸಾಹೇಬ್​ ತೋಟದಲ್ಲಿ‌ ಕಳೆದ 20 ವರ್ಷಗಳಿಂದ ಈ ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ಕೆಲಸ ಮಾಡಿಕೊಂಡು ತೋಟದ ಮನೆಯಲ್ಲೇ ವಾಸವಿದ್ದ ದಂಪತಿ, ಇತ್ತೀಚೆಗೆ ಮಕ್ಕಳ ಮದುವೆ ಮಾಡಿಸಿದ್ದು, ಸಂಬ್ರವಳ್ಳಿಯಲ್ಲಿ ಸಾಲ ಮಾಡಿ ಮನೆಯನ್ನು ಸಹ ಕಟ್ಟಿಸಿದ್ದರು. ಆದರೆ ಸಾಲ ತೀರಿಸಲು ಪರದಾಡುತ್ತಿದ್ದ ಇವರು ತೋಟದಲ್ಲಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net