ಪುನರುತ್ಥಾನದ ಹಾದಿಯಲ್ಲಿದೆ ದೇಶ, ವಿವಿಧ ವಲಯಗಳಲ್ಲಿ ಹೆಚ್ಚುತ್ತಿದೆ ನೇಮಕಾತಿ

hiring
Published on

ಮುಂಬೈ: ಕೋವಿಡ್​-19 ಲಾಕ್​ಡೌನ್​ ಸಡಿಲಿಕೆಯಿಂದ ಮೊದಲ್ಗೊಂಡು ಅನ್​ಲಾಕ್​ 1.0 ಅವಧಿಯಲ್ಲಿ ದೇಶ ಪುನರುತ್ಥಾನದ ಹಾದಿಯಲ್ಲಿದೆ. ಅನ್​ಲಾಕ್​ 1.0 ಜಾರಿಗೆ ಬಂದ ನಂತರದಲ್ಲಿ ವಿವಿಧ ವಲಯಗಳಲ್ಲಿನ ನೇಮಕಾತಿ ಹೆಚ್ಚಾಗುತ್ತಿರುವುದನ್ನು ಗಮನಿಸಿದಾಗ ಇದರ ಸುಳಿವು ಸಿಕ್ಕಿದೆ.

ಒಂದು ಮೂಲದ ಪ್ರಕಾರ ಎಜುಟೆಕ್​, ಇ-ಕಾಮರ್ಸ್​, ಡೇಟಾ ಪ್ರೊಸೆಸ್ಸಿಂಗ್​, ವಿತರಣಾ ಜಾಲ ನಿರ್ವಹಣೆ, ಬ್ಯಾಂಕಿಂಗ್​, ಎಫ್​ಎಂಸಿಜಿ, ಆರೋಗ್ಯ ರಕ್ಷಣೆ, ವಿಮೆ, ಡಿಜಿಟಲ್​ ತಜ್ಞರು, ಆರ್ಥಿಕ ವಲಯ ಮತ್ತು ಔಷಧ ವ್ಯವಹಾರಗಳ ಕ್ಷೇತ್ರದಲ್ಲಿ ನೇಮಕಾತಿಗಳು ಹೆಚ್ಚಾಗಿವೆ.

ಕೋವಿಡ್​ ಪೂರ್ವದ ಸಂದರ್ಭಕ್ಕೆ ಹೋಲಿಸಿದರೆ, ಕೋವಿಡ್​-19 ಲಾಕ್​ಡೌನ್​ ಅವಧಿಯಲ್ಲಿ ದೇಶಾದ್ಯಂತ ವಿವಿಧ ಉದ್ಯೋಗಗಳ ನೇಮಕಾತಿ ಪ್ರಮಾಣ ಶೇ.80 ಕುಸಿದಿತ್ತು. ಆದರೆ ಅನ್​ಲಾಕ್​ 1.0 ಆರಂಭವಾದ ನಂತರದಲ್ಲಿ ಉದ್ಯೋಗ ನೇಮಕಾತಿ ಕುಸಿತ ಪ್ರಮಾಣ ಶೇ.50 ಸುಧಾರಿಸಿದೆ ಎಂದು ಉದ್ಯೋಗ ನೇಮಕಾತಿ ವಲಯದ ತಜ್ಞರು ತಿಳಿಸಿದ್ದಾರೆ.

ವಿವಿಧ ವಲಯಗಳಲ್ಲಿ ನೇಮಕಾತಿ ಪ್ರಮಾಣ ಸಾಕಷ್ಟು ಸುಧಾರಿಸಿದೆ. ಈ ಆವೇಗ ಇನ್ನಷ್ಟು ಕಾಲ ಹೀಗೆ ಮುಂದುವರಿಯಲಿದೆ. ಆದರೆ ಪ್ರವಾಸೋದ್ಯಮದಂಥ ಕೆಲ ವಲಯಗಳಲ್ಲಿ ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net